ಶಿಕ್ಷಕರು ವೃತ್ತಿ ಧರ್ಮದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು

| Published : Dec 21 2023, 01:15 AM IST

ಶಿಕ್ಷಕರು ವೃತ್ತಿ ಧರ್ಮದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಕಾಪಡಿ ಶಿಕ್ಷಕರ ವೃತ್ತಿಗೆ ಗೌರವ ತರಬೇಕು.

ಚಿತ್ರದುರ್ಗ: ಗುಣಮಟ್ಟದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳಿದ್ದಾಗ ಮಾತ್ರ ವಿದ್ಯಾಸಂಸ್ಥಗೆ ರ್‍ಯಾಂಕ್‌ಗಳು ತಂತಾನೆ ಲಭ್ಯವಾಗುತ್ತವೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಧುರ ಕ್ಷಣಗಳು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಎನ್ನುವುದು ಪವಿತ್ರ ಮತ್ತು ಶ್ರೇಷ್ಟವಾದುದು, ಪರಮಾತ್ಮನ ಸ್ವರೂಪವಿದ್ದಂತೆ. ಶಿಕ್ಷಕರುಗಳು ವೃತ್ತಿ ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಶಿಕ್ಷಕರಲ್ಲಿ ತಾಳ್ಮೆಯಿರಬೇಕು. ನಿರ್ದಿಷ್ಟವಾದ ಗುರಿಯಿಟ್ಟುಕೊಂಡು ಮುಂದಿನ ಹೆಜ್ಜೆಯಿಡಬೇಕು ಎಂದರು.

ಗುಣಮಟ್ಟದ ವಿದ್ಯಾರ್ಥಿಗಳು ಕಡಿಮೆಯಾಗುತ್ತಿರುವುದರಿಂದ ಬಹಳ ದಿನಗಳಿಂದ ಸಂಸ್ಥೆಗೆ ರ್‍ಯಾಂಕ್‌ ಬಂದಿರಲಿಲ್ಲ. ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ನಡೆದ ಬಿಕಾಂ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಕವಿತಾ ಪ್ರಥಮ ರ್‍ಯಾಂಕ್‌ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪಿಯುಸಿಯಲ್ಲಿ ರಾಜ್ಯಕ್ಕೆ 6ನೆ ರ್‍ಯಾಂಕ್‌ಗಳಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಣಾಮ ಉಚಿತ ಶಿಕ್ಷಣ ನೀಡಿದ್ದೇವೆ ಎಂದರು.

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸಂಸ್ಥೆಯಲ್ಲಿ ಶಿಕ್ಷಣ ಪಡೆದು ವಿವಿಧ ಕಡೆ ಉದ್ಯೋಗದಲ್ಲಿರುವುದು ನಿಜವಾಗಿಯೂ ನಮಗೆ ಖುಷಿ ಕೊಟ್ಟಿದೆ. ಸರ್ಕಾರದ ಗ್ರಾಂಟ್‍ಗಾಗಿ 18 ವರ್ಷಗಳ ಕಾಲ ಕಾದು ಕೆಲಸ ಮಾಡಿದ ಸಿಬ್ಬಂದಿಗಳು ಸಂಸ್ಥೆಯಲ್ಲಿದ್ದಾರೆ. ಕೇವಲ ಹಣ ಗಳಿಕೆಯಷ್ಟೆ ಸಂಸ್ಥೆಯ ಉದ್ದೇಶವಲ್ಲ. ಶೈಕ್ಷಣಿಕ ಸಾರ್ಥಕತೆಗಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಹುಡುಗಾಟ, ಉಡಾಫೆ ಇರಬಾರದು ಎಂದರು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಈ.ಭೈರಸಿದ್ದಪ್ಪ, ಆರ್.ಎಸ್.ರಾಜು, ಡಾ.ಬಿ.ಸಿ.ಅನಂತರಾಮು, ಎಂ.ವಿ.ಗೋವಿಂದ ರಾಜು, ಡಾ.ಕೆ.ಪಿ.ನಾಗಭೂಷಣ, ಡಾ.ಬಿ.ಚಂದ್ರಪ್ಪ, ಡಾ.ಜಿ.ಬಿ.ರಾಜಪ್ಪ, ವಿ.ಪ್ರಕಾಶ್, ಡಾ.ಲಿಂಗರಾಜು, ಆರ್.ಹಂಚಿನಮನೆ, ಬಸವರಾಜ್ ಸಿ. ಎಮ್.ಜಿ.ಪರಶುರಾಮ್, ಜಿ.ಜೆ.ಸೂರಯ್ಯ, ಸ್ವಾಲೇಹ ಬೇಗಂ, ಕಲ್ಪನಾ ಎಂ.ಆರ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರುಗಳು, ಬೋಧಕ, ಬೋಧಕೇತರ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.