ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂದಿನ ದಿನಮಾನಗಳಲ್ಲಿ ರಾಜ್ಯದ, ಅದರಲ್ಲೂ ಉತ್ತರ ಕರ್ನಾಟಕದ ಟೆನ್ನಿಸ್‌ಬಾಲ್ ಕ್ರಿಕೆಟ್ ಆಟಗಾರರಿಗೆ ಉಜ್ವಲ ಭವಿಷ್ಯವಿದೆ ಎಂದು ಕರ್ನಾಟಕ ರಾಜ್ಯ T10 ಟೆನ್ನಿಸಬಾಲ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಮತ್ತು ಉತ್ತರ ಕರ್ನಾಟಕ T10 ಟೆನ್ನಿಸಬಾಲ್ ಕ್ರಿಕೆಟ್ ಅಸೋಶಿಯೇಷನ್ ವಿಜಯಪುರದ ಪ್ರಧಾನ ಕಾರ್ಯದರ್ಶಿ ಡಾ.ಅಶೋಕಕುಮಾರ ಜಾಧವ ಹೇಳಿದರು.ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಟೆನ್ನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ವಿಜಯಪುರದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸಿದ ತಂಡದೊಂದಿಗೆ ಅವರು ತೆರಳುವಾಗ ಮಾತನಾಡಿದರು.
ಪ್ರಸಕ್ತ ಬಾರಿ ತಂಡಗಳು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ತೆರಳುತ್ತಿವೆ. ಪ್ರಥಮ ಸ್ಥಾನದ ಜೊತೆಗೆ ಚಾಂಪಿಯನ್ ಆಗಿ ಮರಳಲಿದೆ. ರಾಜ್ಯ ಮತ್ತು ಉತ್ತರ ಕರ್ನಾಟಕದ ಎರಡೂ ಸಂಸ್ಥೆಗಳು ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಅಸೋಶಿಯೇಶನ್ ಚುಕ್ಕಾಣಿ ಹಿಡಿದಿರುವ ಶಹೀದಾ ಬೇಗಂ, ಉತ್ತರ ಕರ್ನಾಟಕ ಅಸೋಶಿಯೇಶನ್ ಅಧ್ಯಕ್ಷರು, ಹುನಗುಂದ ಶಾಸಕ ಡಾ.ವಿಜಯಾನಂದ ಕಾಶಪ್ಪನವರ ಅವರ ಪ್ರೋತ್ಸಾಹ, ಪ್ರೇರಣೆ ಸದಾ ಸ್ಮರಣೀಯವಾಗಿದೆ. ಜತೆಗೆ ಕ್ರೀಡಾಪಟುಗಳು ಹೆಮ್ಮೆಪಡುವ ರೀತಿಯಲ್ಲಿದೆ. ಅವರ ಪ್ರೋತ್ಸಾಹ ಆಟಗಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು.
ಬೆಳಗಾವಿ ವಲಯದ ಸಂಯೋಜಕ ಡಾ.ಐ.ಎಂ.ಮಕ್ಕುಭಾಯಿ ಮಾತನಾಡಿ, ಆಟಗಾರರು ಪ್ರತಿಭಾಶಾಲಿಗಳಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಕೂಡಿದ ಎರಡೂ ತಂಡದ ಆಟಗಾರರು ಚಾಂಪಿಯನ್‌ಶಿಪ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಕರ್ನಾಟಕದಲ್ಲೇ ಸಂಘಟಿಸಲು ಎಲ್ಲ ವಲಯದ ಸಂಯೋಜಕರು ಉತ್ಸುಕರಾಗಿದ್ದೇವೆ ಎಂದು ಹೇಳಿದರು.ಉತ್ತರ ಕರ್ನಾಟಕ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ರವಿ ಎಫ್. ಚವ್ಹಾಣ ಮಾತನಾಡಿ, ಒಂಬತ್ತು ಜನ ಪುರುಷ ಮತ್ತು ಏಳು ಜನ ಮಹಿಳಾ ವ್ಯವಸ್ಥಾಪಕರು ತಂಡದೊಂದಿಗೆ ಇದ್ದಾರೆ. ಪಾಲಕರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ. ಉತ್ಸಾಹದಿಂದ ಹೊಗುತ್ತಿದ್ದಾರೆ. ಮತ್ತು ಅದರ ಎರಡುಪಟ್ಟು ಉತ್ಸಾಹದಿಂದ ತಂಡಗಳು ಮರಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ತಂಡದ ವ್ಯವಸ್ಥಾಪಕಿ ಅಕ್ಕುಬಾಯಿ ನಾಯಕ, ರಾಜ್ಯ ತಂಡದ ನಾಯಕ ವಿಕಾಸ ಪಾಟೀಲ, ನಾಯಕಿ ರಾಜೇಶ್ವರಿ ಮಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಇರ್ಷಾದ ಅವರು ಎಲ್ಲ ಆಟಗಾರರಿಗೆ ಮತ್ತು ತಂಡದ ವ್ಯವಸ್ಥಾಪಕರಿಗೆ ಧಾರವಾಡ ಅಸೋಶಿಯೇಶನ್ ಪರವಾಗಿ ಸನ್ಮಾನಿಸಿದರು.ಧಾರವಾಡ ಕಿಟೆಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಜಿಲ್ಲಾ ಸಂಯೋಜಕ ಡಾ.ಪ್ರವೀಣಕುಮಾರ ಡ್ಯಾನೀಯಲ್, ಭಾರತಿ ಕೊಠಾರಿ, ಹುಬ್ಬಳ್ಳಿಯ ಶಿಲ್ಪಾ ಸುಳ್ಳದ, ಇಂದುಮತಿ ಬಜಂತ್ರಿ, ಸೋಮಶೇಖರ ರಾಠೋಡ, ಸಲೀಮ ಬೇಪಾರಿ, ಶ್ರೀಕಾಂತ ಕಾಖಂಡಕಿ, ಜಗದೀಶ ದೊಡಮನಿ, ಹಜರತಬಿಲಾಲ ಹೆಬ್ಬಾಳ, ಬೆಳಗಾವಿಯ ಪದ್ಮಶ್ರೀ ಉಪಸ್ಥಿತರಿದ್ದರು.