.ವೈಭವಯುತ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ

| Published : Sep 15 2024, 01:48 AM IST

ಸಾರಾಂಶ

ತಾಳಿಕೋಟೆ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಏಳನೇ ದಿನದಂದು ವಿವಿಧ ವಾದ್ಯ ಮೇಳಗಳೊಂದಿಗೆ ವೈಭವಯುತ ಮೆರವಣಿಗೆ ಮೂಲಕ ಶುಕ್ರವಾರ ಅದ್ಧೂರಿಯಾಗಿ ವಿಸರ್ಜಿಸಲಾಯಿತು. ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ರಾಜವಾಡೆಗೆ ಆಗಮಿಸಿದವು. ನಂತರ ರಾಜವಾಡೆಯಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ ನೇರವೇರಿಸಿ ವಿಸರ್ಜನಾ ಮೇರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆ ಉದ್ದಕ್ಕೂ ಡಿಜೆ ನಾದ, ಯುವಕರ ಹೆಜ್ಜೆ ಹಾಕಿದರು. ಜತೆಗೆ ಕುಣಿದು ಕುಪ್ಪಳಿಸಿದರು. ಪೊಲೀಸ್ ಇಲಾಖೆಯಿಂದ ಪಿಎಸ್‌ಐ ರಾಮನಗೌಡ ಸಂಕನಾಳ ಹಾಗೂ ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಅವರು ಪರಿಸರ ಪೂರಕ ಅಲಂಕಾರಿಕ ಗಣೇಶ ಮೂರ್ತಿಗಳಿಗೆ ಬಹುಮಾನ ವಿತರಿಸಿದರು.

--------

ಗಣಪತಿಯ ಭವ್ಯ ಶೋಭಾಯಾತ್ರೆ

ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆಯೊಂದಿಗೆ ವಿಸರ್ಜನಾ ಮೆರವಣಿಗೆ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಜರುಗಲಿದೆ. ಈ ಮೆರವಣಿಗೆಗೆ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ವೇ.ಸಂತೋಷಭಟ್ ಜೋಶಿ ಅಲ್ಲದೇ ವಿವಿಧ ರಾಜಕೀಯ ನಾಯಕರು ಚಾಲನೆ ನೀಡಲಿದ್ದಾರೆ.----------