ಸಾರಾಂಶ
ಮಸ್ಕಿಯಲ್ಲಿ ರಾಯಚೂರಿನ ಎಸಿ ಮಹಿಬೂಬಿ ವರ್ಗಾವಣೆ ಖಂಡಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಆಯುಕ್ತೆ ಮಹಿಬೂಬಿ ಯವರ ದಿಡೀರ್ ವರ್ಗಾವಣೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮಸ್ಕಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಹಳೆ ಬಸ್‌ನಿಲ್ದಾಣ ಹತ್ತಿರ ಮಸ್ಕಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ ಅವರಿಗೆ ಸಲ್ಲಿಸಿ, ಇಲ್ಲಿನ ಸ್ಥಳೀಯ ರಾಜಕಾರಣಿಗಳ ದುಷ್ಟ ದಂಧೆಗೆ ಮಣೆ ಹಾಕಲಿಲ್ಲ ಎಂಬ ಕಾರಣದಿಂದ ಎಸಿ ಮಹಿಬೂಬಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆದು ಸಹಾಯಕ ಆಯುಕ್ತೆ ಮಹಿಬೂಬಿ ಅವರನ್ನು ರಾಯಚೂರಿನಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ, ರಾಯಚೂರು ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಒಕ್ಕೂಟದ ಮಾರುತಿ ಜೆನ್ನಾಪೂರು, ಸಂತೋಷ ಹಿರೇದಿನ್ನಿ, ಬಸವರಾಜ ಕೋಠಾರಿ, ಮಲ್ಲಪ್ಪ ಗೋನಾಳ, ಕೀರಣ ಮುರಾರಿ, ವೆಂಕಟೇಶ ಚಿಲ್ಕರಾಗಿ,ಹುಲಗಪ್ಪ ಹಸಮಕಲ್, ಅಮರೇಶ ಹಿರೇದಿನ್ನಿ, ಮಹಿಬೂಬ್ ಕುಷ್ಟಗಿ ಸೇರಿದಂತೆ ಇತರರು ಇದ್ದರು.