ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು

| Published : Nov 09 2024, 01:13 AM IST

ಸಾರಾಂಶ

ಭಾವನೆಗಳನ್ನು ನಿರ್ವಹಿಸಲು ಕೆಲವು ಅಭ್ಯಾಸ ರೂಢಿಕೊಳ್ಳಬೇಕು. ಶಿಸ್ತು ಬೆಳೆಸುವ ಜತೆಗೆ ಹಲವಾರು ಉತ್ತಮ ಹವ್ಯಾಸ ಅಳವಡಿಸಿಕೊಳ್ಳುವುದು ಅಗತ್ಯ.

ಧಾರವಾಡ:

ಜೀವನದಲ್ಲಿ ಮಹತ್ವದ ಗುರಿ ಹೊಂದುವುದು ಮತ್ತು ಪ್ರಸ್ತುತ ಪ್ರತಿಯೊಬ್ಬರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಡಿಮಾನ್ಸ್ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಹೇಳಿದರು.

ಕರ್ನಾಟಕ ಕಲಾ ಕಾಲೇಜಿನ ಮನೋವಿಜ್ಞಾನ ವಿಭಾಗವು ''''ವೈಯಕ್ತಿಕ ಶ್ರೇಷ್ಠತೆಯನ್ನು ಸಾಧಿಸುವದು'''', ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ''''ಭಾವನೆಗಳ ನಿರ್ವಹಣೆ'''' ಕುರಿತು ಮಾತನಾಡಿದ ಅವರು, ಭಾವನೆಗಳನ್ನು ನಿರ್ವಹಿಸಲು ಕೆಲವು ಅಭ್ಯಾಸ ರೂಢಿಕೊಳ್ಳಬೇಕು. ಶಿಸ್ತು ಬೆಳೆಸುವ ಜತೆಗೆ ಹಲವಾರು ಉತ್ತಮ ಹವ್ಯಾಸ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.

ಒತ್ತಡ ಮತ್ತು ಭಾವನೆ ನಿರ್ವಹಿಸಲು ಅಗತ್ಯ ತಂತ್ರಗಳನ್ನು ರೂಪಿಸಿಕೊಳ್ಳಬೇಕು ಎಂದ ಅವರು, ವಾಸ್ತವತೆಯನ್ನು ಸ್ವಯಂ ಸ್ವೀಕಾರದ ಮೂಲಕ ಒಪ್ಪಿಕೊಂಡು ನಿರ್ದಿಷ್ಟ ಗುರಿ ಸಾಧಿಸಬೇಕೆಂದು ಹೇಳಿದರು.

ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಯೋಗ, ಧ್ಯಾನದಂತಹ ಹವ್ಯಾಸಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಜಿ. ಜಾಧವ, ಓದುವ ಹವ್ಯಾಸವನ್ನು ಹೇಗೆ ಬೆಳೆಸಿಕೊಳ್ಳುವದು, ಶಿರಸಿಯ ಪ್ರಥಮ ದರ್ಜೆಯ ಕಾಲೇಜಿನ ಡಾ. ಅನಿತಾ ಭಟ್ ಅವರು ''''ವ್ಯಕ್ತಿಗತ ಅಭಿವೃದ್ಧಿ'''', ಡಾ.ಎ.ಬಿ.ಬಿಜಾಪುರ ಸಂವಹನ ಕೌಶಲ್ಯಗಳು ಮತ್ತು ಡಾ. ಅಮೃತ ಯಾರ್ದಿ ''''ಜೀವನದ ಮೌಲ್ಯಗಳು ವಿಷಯದ ಕುರಿತು ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಅಕಾಡೆಮಿಕ್ ಡೀನ್ ಡಾ. ಮುಕುಂದ ಲಮಾಣಿ, ಜಿಮ್‌ಖಾನ್‌ ಉಪಾಧ್ಯಕ್ಷ ಡಾ. ಐ.ಸಿ. ಮುಳಗಂದ, ಡಾ. ಗೀತಾ ಪಾಸ್ತೆ, ಪ್ರೊ. ಗುರುಪ್ರಸಾದ ಹೆಗ್ಡೆ, ಪ್ರೊ. ಅಶೋಕ ಶ್ಯಾಗೋಟಿ ಇದ್ದರು.