ಸಾರಾಂಶ
ಸಮ ಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ ಎಂದು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರುಸಮ ಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ ಎಂದು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅಭಿಪ್ರಾಯಪಟ್ಟರು. ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ಲಂಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗದಿಂದ ಮನ-ಮನೆಗೂ ಸಂವಿಧಾನ ಜಾಗೃತಿ ಕಾರ್ಯಕ್ರಮದ ಭಾಗವಾಗಿ ತುಮಕೂರು ಅಮಾನಿಕೆರೆ ಸಂವಿಧಾನ ಪೀಠಿಕೆ ವೇದಿಕೆಯಲ್ಲಿ ಸಾರ್ವಜನಿಕರಿಗೆ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿ ಸ್ವಾತಂತ್ರ್ಯ,ಸಮಾನತೆ, ಬಂಧುತ್ವ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳು, ಸಾಮಾಜಿಕ ನ್ಯಾಯ ಪೋಸ್ಟ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.ನಮ್ಮ ಸಂವಿಧಾನ ಜಾತಿ,ವರ್ಗ,ಲಿಂಗ,ಭಾಷೆ, ಧರ್ಮ ಎಂಬ ಭೇದವಿಲ್ಲದೆ ಸಮಾಜವನ್ನು ಒಂದಾಗಿ ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದೆ ಸಮ ಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ ಎಂದರು.
ಸಂವಿಧಾನ ಸ್ನೇಹಿ ಬಳಗದ ವಿನಯ್ ಶ್ರೀನಿವಾಸ್ ಮಾತನಾಡಿ, ಸಂವಿಧಾನವನ್ನು ಬದಲಾಯಿಸದಿದ್ದರು ಸಂವಿಧಾನದಲ್ಲಿರುವ ಅಂಶಗಳನಿಟ್ಟುಕೊಂಡು ಬಲಪಂಥೀಯ ಸಿದ್ದಾಂತವುಳ್ಳ ಸರ್ಕಾರಗಳು ಅದರ ವಿರುದ್ಧವಾಗಿ ಕಾನೂನುಗಳನ್ನು ಮಾಡಿ ನ್ಯಾಯಗಳಿಂದ ಮತ್ತು ಆಯೋಗಗಳಿಂದ ಒಪ್ಪಿಸುವ ಕೆಲಸ ಮಾಡುತ್ತಿವೆ. ತಾಜಾ ಉದಾಹರಣೆ ಎಸ್‌ಐಆರ್ ಆಗಿದೆ. ಆದ್ದರಿಂದ ಸಂವಿಧಾನದ ಮುಖಾಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಹಾಗೂ ಪ್ರೀತಿಯನ್ನು ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಸಾಹಿತಿ ಜನಾರ್ಧನ್ ಕೆಸರುಗದ್ದೆ, ಪ್ರಗತಿರ ಸಂಘಟನೆಗಳ ಒಕ್ಕೂಟದ ಎ.ನರಸಿಂಹಮೂರ್ತಿ ತಾಜುದ್ದೀನ್ ಷರೀಫ್, ಸಾವಿತ್ರಿಬಾಪುಲೆ ಮಹಿಳಾ ಸಂಘಟನೆಯ ಅನುಪಮಾ, ತುಮಕೂರು ಸ್ಲಂ ಸಮಿತಿಯ ತಿರುಮಲಯ್ಯ, ಶಂಕ್ರಯ್ಯ, ಕೃಷ್ಣಮೂರ್ತಿ, ಅರುಣ್, ಮುಬಾರಕ್, ಸಂವಿಧಾನ ಸ್ನೇಹಿ ಬಳಗದ ಅಶ್ವಿನಿಬೋದ್, ಪೂರ್ಣರವಿಶಂಕರ್, ಮನೋಜ್‌ಕುಮಾರ್, ವಿನೀತ್‌ಕುಮಾರ್, ಶಿವಕುಮಾರ್, ವೆಂಕಟೇಶ್,ಮೇಘನ, ಭರತ್ ಮುಂತಾದವರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))