ರಂಗಕಲೆಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ

| Published : Dec 28 2023, 01:46 AM IST

ಸಾರಾಂಶ

ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು, ಸಿಡಿಗಿನಮೊಳೆ ಚಂದ್ರಯ್ಯ, ಬೆಳಗಲು ವೀರಣ್ಣ ಸುಭದ್ರಮ್ಮ ಮನ್ಸೂರು ಇವರಿಂದ ಬಳ್ಳಾರಿಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದೆ.

ಬಳ್ಳಾರಿ: ನಗರದ ವಾಜಪೇಯಿ ಬಡಾವಣೆಯಲ್ಲಿ ರಂಗತೋರಣ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ನೀನಾಸಂ-ನಾಟಕೋತ್ಸವದಲ್ಲಿ “ಆ ಲಯ ಈ ಲಯ " ನಾಟಕ ಪ್ರದರ್ಶನಗೊಂಡಿತು.

ಚಾಲನೆ ನೀಡಿ ಮಾತನಾಡಿದ ನಗರದ ಸಿವಿಲ್ ಎಂಜಿನಿಯರ್ ಎಂ.ಜಿ. ಗೌಡ ಅವರು, ಬಳ್ಳಾರಿ ಜಿಲ್ಲೆ ರಂಗಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು, ಸಿಡಿಗಿನಮೊಳೆ ಚಂದ್ರಯ್ಯ, ಬೆಳಗಲು ವೀರಣ್ಣ ಸುಭದ್ರಮ್ಮ ಮನ್ಸೂರು ಇವರಿಂದ ಬಳ್ಳಾರಿಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದೆ. ಇಂತಹ ರಂಗಕಲೆಯ ಉಳಿಯಲು ರಂಗಮಂದಿರಗಳ ನಿರ್ಮಾಣ ಅವಶ್ಯಕ. ಈ ನಿಟ್ಚಿನಲ್ಲಿ ರಂಗತೋರಣ ಶ್ರಮಿಸುತ್ತಿರುವದು ಪ್ರಶಂಸನೀಯ ಎಂದರು.

ವಿಜಡಮ್ ಲ್ಯಾಂಡ್ ಶಾಲೆಯ ಮುಖ್ಯಸ್ಥ ಸಂಗನಕಲ್ಲು ಕಟ್ಟೇಗೌಡ ಮಾತನಾಡಿದರು. ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಕಲಾವಿದ ವಡ್ಡೆ ರಾಮಚಂದ್ರ, ಸ್ಥಳೀಯ ಮುಖಂಡರಾದ ಹೊನ್ನನಗೌಡರು ಉಪಸ್ಥಿತಿರಿದ್ದರು .ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಲೂಯಿ ಚಕೋಸಿ ರಚಿಸಿದ “ಆ ಲಯ ಈ ಲಯ " ನಾಟಕ ಪ್ರದರ್ಶನಗೊಂಡಿತು. ವರ್ಣಭೇಧ ನೀತಿಯ ವಿರೋಧದ ಎಳೆಯನ್ನು ಕಥೆಯಾಗಿಸಿಕೊಂಡ ಈ ನಾಟಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು.

ಜನಾಂಗೀಯ ಹಿಂಸೆಯು ಭಾರತದ ಸ್ಮೃತಿಯಲ್ಲಿ ಅಷ್ಟಾಗಿ ಘಾಸಿ ಮಾಡದ ಸಂಗತಿ. ಹೊಸಹತುಶಾಹಿಯ ಕಾಲದಲ್ಲಿ ಬಿಳಿಯರ ಆಳ್ವಿಕೆಯಿದ್ದರೂ ಅದು ಜನಾಂಗೀಯ ಕಲಹದ ಬಣ್ಣ ಪಡೆದುಕೊಂಡದ್ದು. ಆಫ್ರಿಕಾ, ಅಮೆರಿಕ ಮೊದಲಾದ ದೇಶಗಳಲ್ಲಿ ನಡೆದ ಜನಾಂಗೀಯ ಸಂಘರ್ಷದ ಚಿತ್ರಣ. ಆಫ್ರಿಕದ ವಿದ್ಯಾರ್ಥಿ ಸಮೂಹವೊಂದು ಒಂದು ಜನಾಂಗೀಯ ಹಿಂಸೆಗೆ ಪ್ರತಿಕ್ರಿಯಿಸಿದ ಬಗೆಯನ್ನು ನಾಟಕ ಬಿಚ್ಚಿಟಿತು.