ಆ.8ರಂದು ರಾಜ್ಯಾದ್ಯಂತ ಭರವಸೆ ಚಿತ್ರ ಬಿಡುಗಡೆ

| Published : Aug 06 2025, 01:15 AM IST

ಆ.8ರಂದು ರಾಜ್ಯಾದ್ಯಂತ ಭರವಸೆ ಚಿತ್ರ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಟ ವಿನಯ್ ರಾಜ್ ಅಭಿನಯದ ಮತ್ತು ಎ.ಎನ್.ಮುತ್ತು ನಿರ್ದೇಶನದ ಭರವಸೆ ಚಲನಚಿತ್ರವು ಆ.8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಿ.ಸಿ.ನಾಗರಾಜ್ ತಿಳಿಸಿದರು.

ಶಿವಮೊಗ್ಗ: ನಟ ವಿನಯ್ ರಾಜ್ ಅಭಿನಯದ ಮತ್ತು ಎ.ಎನ್.ಮುತ್ತು ನಿರ್ದೇಶನದ ಭರವಸೆ ಚಲನಚಿತ್ರವು ಆ.8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಿ.ಸಿ.ನಾಗರಾಜ್ ತಿಳಿಸಿದರು.ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಈ ಚಿತ್ರದಲ್ಲಿ ಬಹುತೇಕ ಶಿವಮೊಗ್ಗದ ಕಲಾವಿದರೇ ನಟಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳು ಮತ್ತು 4 ಸಾಹಸ ದೃಶ್ಯಗಳಿದ್ದು, ಇದರ ಶೇ.50-60ರಷ್ಟು ಚಿತ್ರೀಕರಣವನ್ನು ಶಿವಮೊಗ್ಗದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲಾಗಿದೆ. ರಾಜ್ಯದ 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದರು.ಚಿತ್ರದ ನಿರ್ದೇಶಕ ಎ.ಎನ್.ಮುತ್ತು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಭರವಸೆಯ ಮೇಲೆ ಬದುಕುತ್ತಾನೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಉತ್ತಮ ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ. ಈ ಚಿತ್ರದಲ್ಲಿ ವಿನಯ್ ರಾಜ್ ನಾಯಕನಾಗಿ ಮತ್ತು ಅಹಲ್ಯಾ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಬಿ.ಸಿ.ನಾಗರಾಜ್ ಅವರು ಕೂಡ ಎರಡನೇ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂತೋಷ್, ಚೇತನಾ ಶೆಟ್ಟಿ, ಗುರುಮೂರ್ತಿ, ಅರ್ಚನಾ ನಿರಂಜನ್, ಸ್ನೇಕ್ ಸುಹಾಸ್, ಸಿದ್ಧಾರ್ಥ ಮುಂತಾದವರಿದ್ದರು.