ಸಾರಾಂಶ
ಆಹಾರ ಅರಸಿ ಬಂದ ಕಾಡಾನೆಗಳ ಹಿಂಡಿನ ಪೈಕಿ ಒಂದು ಆನೆಯ ತಲೆ ಅರಣ್ಯ ಇಲಾಖೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ನ ಗೇಟಿಗೆ ಸಿಲುಕಿ ಕೆಲವು ನಿಮಿಷಗಳ ಕಾಲ ಪರದಾಡಿದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಆಹಾರ ಅರಸಿ ಬಂದ ಕಾಡಾನೆಗಳ ಹಿಂಡಿನ ಪೈಕಿ ಒಂದು ಆನೆಯ ತಲೆ ಅರಣ್ಯ ಇಲಾಖೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ನ ಗೇಟಿಗೆ ಸಿಲುಕಿ ಕೆಲವು ನಿಮಿಷಗಳ ಕಾಲ ಪರದಾಡಿದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಯ ಮರ ಸಂಗ್ರಹಾಲಯದ ಗೇಟಿಗೆ ಕಾಡಾನೆಯ ತಲೆ ಸಿಲುಕಿ ಕೆಲ ನಿಮಿಷ ಸಮಯ ಪರದಾಡಿದೆ. ಅತ್ತಿಂದಿತ್ತ ಎಷ್ಟೇ ಪರದಾಡಿದರೂ ಆಚೆಗೆ ಬರಲು ಸಾಧ್ಯವೇ ಆಗಿಲ್ಲ. ಈ ವೇಳೆ ಜೊತೆಗೆ ಇದ್ದ ಮತ್ತೊಂದು ಕಾಡಾನೆ ಇದರ ರಕ್ಷಣೆಗೆ ಮುಂದಾಗಿದೆ. ಅಷ್ಟರಲ್ಲಿ ಈ ಕಾಡಾನೆ ತನ್ನ ಚಾಣಾಕ್ಷತೆಯಿಂದಲೇ ಗೇಟಿಗೆ ಸಿಲುಕಿದ್ದ ತನ್ನ ತಲೆಯನ್ನು ಹೇಗೋ ಬಿಡಿಸಿಕೊಂಡು ಅಲ್ಲಿಂದ ಪರಾರಿಯಾಗಿದೆ. ಇದೆಲ್ಲವನ್ನೂ ಅಲ್ಲಿಯೇ ಇದ್ದ ಅಥಂಲೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.