ಪ್ರಜ್ಞಾವಂತರ ಮತಗಳೇ ಹೆಚ್ಚು ತಿರಸ್ಕೃತ: ಸಿದ್ದೇಶ್ವರ್ ವಿಷಾದ

| Published : May 25 2024, 01:30 AM IST

ಪ್ರಜ್ಞಾವಂತರ ಮತಗಳೇ ಹೆಚ್ಚು ತಿರಸ್ಕೃತ: ಸಿದ್ದೇಶ್ವರ್ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ಞಾವಂತರ ಮತಗಳೇ ಹೆಚ್ಚು ತಿರಸ್ಕೃತ ಆಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಜ್ಞಾವಂತರ ಮತಗಳೇ ಹೆಚ್ಚು ತಿರಸ್ಕೃತ ಆಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಗುರುವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ವೈಎ. ನಾರಾಯಣ ಸ್ವಾಮಿ ಪರವಾಗಿ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜ್, ರಾಘವೇಂದ್ರ ಪಿಯು ಕಾಲೇಜ್, ಸಪ್ತಗಿರಿ ಪಿಯು ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಪ್ರಜ್ಞಾವಂತರು ಯಾವುದೇ ರೀತಿಯಾಗಿ ತಪ್ಪು ಮಾಡಬಾರದು. ಏಕೆಂದರೆ ಎಲ್ಲದೂ ತಿಳಿದಂತವರು. ಶಿಕ್ಷಕರು ಚುನಾವಣೆ ಸಂದರ್ಭದಲ್ಲಿ, ಮತಯಾಚನೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ನೀಡಿದ ಪೆನ್ನಿನಲ್ಲಿ ಮತಯಾಚನೆ ಮಾಡಬೇಕು. ಯಾವುದೇ ರೀತಿಯ ಅಡ್ಡ ಪರಿಣಾಮ ಮತಗಳು ಹಾಕದಂತೆ ಜಾಗೃತವಾಗಿ ಮತಯಾಚನೆ ಮಾಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ತು ಸದಸ್ಯ ಎಸ್.ಎಂ. ಸುಂಕನೂರು ಮಾತನಾಡಿ, ವೈ.ಎ. ನಾರಾಯಣ ಸ್ವಾಮಿ ಶಿಕ್ಷಕರ ಹಿತಚಿಂತನೆ ಬಯಸುವಂತಹ ಉತ್ತಮ ವ್ಯಕ್ತಿ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಪರಿಷತ್‌ನಲ್ಲಿ ಸಾಕಷ್ಟು ಬಾರಿ ಸಮಸ್ಯೆಗಳಿಗೆ ಬೆಳಕು ಚೆಲ್ಲಿದ್ದಾರೆ. ಅವುಗಳಿಗೆ ಪರಿಹಾರ ಕೂಡ ಸರ್ಕಾರದಲ್ಲಿ ಕೊಡಿಸಿದ್ದಾರೆ. ಇಂತಹ ಅನುಭವಿ ರಾಜಕಾರಣಿಯನ್ನು ಪ್ರಜ್ಞಾವಂತ ಶಿಕ್ಷಕರು ತಮ್ಮ ಪ್ರಥಮ ಪ್ರಶಸ್ತಿ ನೀಡುವುದರ ಮುಖಾಂತರ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಎಸ್.ವಿ. ಸಂಕನೂರು, ಮಾಜಿ ವಿಧಾನ ಪರಿಷತ್ತು ಸದಸ್ಯ ಅರುಣ್ ಶಾಪೂರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ಎಚ್.ಎನ್. ಶಿವಕುಮಾರ್, ವಕೀಲರಾದ ಕಾಕನೂರು ಮಂಜುನಾಥ್, ಪಿಯು ಕಾಲೇಜು ಅಧ್ಯಕ್ಷ ಸಿ.ಬಿ. ರವಿ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾಮರೆಡ್ಡಿ ಹಾಗೂ ಇನ್ನೂ ಇತರ ಮುಖಂಡರು ಉಪಸ್ಥಿತರಿದ್ದರು.

- - - -24ಕೆಡಿವಿಜಿ32, 33ಃ:

ದಾವಣಗೆರೆಯ ವಿವಿಧ ಕಾಲೇಜುಗಳಲ್ಲಿ ಡಾ. ವೈ.ಎ. ನಾರಾಯಣ ಸ್ವಾಮಿ ಪರವಾಗಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಮತಯಾಚನೆ ಮಾಡಿದರು.