ಸಾಲುಮರದ ತಿಮ್ಮಕ್ಕ ನಮಗೆಲ್ಲಾ ಸ್ಫೂರ್ತಿ: ಎಂ.ವಿ.ರಾಜೇಗೌಡ

| Published : Nov 17 2025, 12:45 AM IST

ಸಾಲುಮರದ ತಿಮ್ಮಕ್ಕ ನಮಗೆಲ್ಲಾ ಸ್ಫೂರ್ತಿ: ಎಂ.ವಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿರಾರು ಗಿಡಗಳನ್ನು ನೆಟ್ಟು ತಿಮ್ಮಕ್ಕ ತಮ್ಮ ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಅವರ ಪರಿಸರ ಪ್ರೇಮ ಚಿರಸ್ಥಾಯಿಯಾಗಿಸಿದೆ. ಮಹಾಚೇತನದ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ನಾವುಗಳು ಕೂಡ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಕ್ಕಳಿಲ್ಲ ಎಂಬ ಕೊರತೆ ಕಾಣದಂತೆ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮಗೆಲ್ಲಾ ಸ್ಪೂರ್ತಿದಾಯಕ ಎಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮುದುಗೆರೆ ಎಂ.ವಿ.ರಾಜೇಗೌಡ ಹೇಳಿದರು.

ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಸಂಘಟಿಸಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ವವಾಗಿದೆ ಎಂದರು.

ಸಾವಿರಾರು ಗಿಡಗಳನ್ನು ನೆಟ್ಟು ತಿಮ್ಮಕ್ಕ ತಮ್ಮ ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಅವರ ಪರಿಸರ ಪ್ರೇಮ ಚಿರಸ್ಥಾಯಿಯಾಗಿಸಿದೆ. ಮಹಾಚೇತನದ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ನಾವುಗಳು ಕೂಡ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸಬೇಕು ಎಂದರು.

ಈ ವೇಳೆ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಕಾರ್ಯದರ್ಶಿ ಕಟ್ಟೆ ಮಹೇಶ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಚಾ.ಶಿ ಜಯಕುಮಾರ್, ಉಪನ್ಯಾಸಕ ಕತ್ತರಘಟ್ಟ ವಾಸು, ಕೆ.ಎಸ್.ಆರ್.ಟಿ ಸಿ ನಿವೃತ್ತ ಚಾಲಕ ಪುಟ್ಟಣ್ಣ, ಶಿಕ್ಷಕ ಕಾಡುಮೆಣುಸ ಚಂದ್ರು, ಜಯ ಕರ್ನಾಟಕ ಅಧ್ಯಕ್ಷ ಸೋಮಶೇಖರ್, ಕರವೇ ಕಸಬಾ ಅಧ್ಯಕ್ಷ ಕೊಮ್ಮೆನಹಳ್ಳಿ ಅನಿಲ್, ಹೊನ್ನೇನಹಳ್ಳಿ ಸ್ವಾಮಿ, ವೆಂಕಟೇಶ್, ಐ.ಬಿ.ತಮ್ಮಣ್ಣ, ಕಟ್ಟಹಳ್ಳಿ ಸುರೇಶ, ಗಂಜೀಗೆರೆ ಮಹೇಶ್ ಸೇರಿದಂತೆ ಹಲವರು ತಿಮ್ಮಕ್ಕ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ನಾಳೆ ಬೆಟ್ಟದ ಅರಸಮ್ಮನ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ

ಹಲಗೂರು: ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಸುತ್ತಮುತ್ತಲಿನ ಗ್ರಾಮದ ಆರಾಧ್ಯ ದೇವತೆ ಬೆಟ್ಟದರಸಮ್ಮನ ಸನ್ನಿಧಿಯಲ್ಲಿ ನ.18ರಂದು ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ ಬೆಟ್ಟದರಸಮ್ಮ ದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆ, ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30 ಗಂಟೆಗೆ ದೇವಸ್ಥಾನದ ಅವರಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಪ್ರಯುಕ್ತ ಭಕ್ತಾದಿಗಳಿಂದ ಲಕ್ಷದೀಪೋತ್ಸವಕ್ಕೆ ಚಾಲನೆ ದೊರೆಯಲಿದೆ. ದೇವರಿಗೆ ಪೂಜೆ ಪುನಸ್ಕಾರಗಳು ಮುಗಿದ ನಂತರ ಪ್ರಸಾದ ವಿನಿಯೋಗವಿದೆ.