ರೇವಾ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆ ಬುಧವಾರ ಅರ್ಥಪೂರ್ಣವಾಗಿ ನಡೆಯಿತು. ಸಂಸ್ಥಾಪನಾ ದಿನದ ಅಂಗವಾಗಿ ಭಾರತೀಯ ವಾಯು ಸೇನೆ ಮಾಜಿ ಚೀಫ್ ಆಫ್ ಏರ್ ಸ್ಟ್ರಾಫ್ ಏರ್ ಚೀಫ್ ಮಾರ್ಷಲ್ ಫಾಲಿ ಎಚ್. ಮೇಜರ್, ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಯಭಾರಿ ನಿರುಪಮಾ ಮೆನನ್ ರಾವ್, ನಟಿ ಜಯಸುಧಾ ಇವರೆಲ್ಲರಿಗೂ ಪ್ರತಿಷ್ಠಿತ ರೇವಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರೇವಾ ವಿವಿ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಅವರು ಜನ್ಮದಿನದ ಅಂಗವಾಗಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಗಣ್ಯರು ಅವರಿಗೆ ಹುಟ್ಟುಹಬ್ಬದ ಅಭಿನಂದನೆ ತಿಳಿಸಿದರು.ಈ ವೇಳೆ ಮಾತನಾಡಿದ ಶ್ಯಾಮರಾಜು ಅವರು, ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು ಕರ್ನಾಟಕದಲ್ಲಿ ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಯನ್ನುಸ್ಥಾಪಿಸಿ ಬೆಳೆಸಿದ ಯಶೋಗಾಥೆಯನ್ನು ವಿವರಿಸಿದರು. ಮೌಲ್ಯಗಳು, ಶಿಸ್ತು, ಕಠಿಣ ಪರಿಶ್ರಮ, ಹಿರಿಯರಿಗೆ ಗೌರವ ನೀಡುವುದು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಗುಣಗಳು ಮನುಷ್ಯನಿಗೆ ಬಹಳ ಮುಖ್ಯ. ಈ ಗುಣಗಳೇ ನನ್ನನ್ನು ಈ ಮಟ್ಟದವರೆಗೆ ಕರೆತಂದಿವೆ. ನನ್ನ ಪಾಲಿಗೆ ಇವೇ ಶಿಕ್ಷಣದ ನಿಜವಾದ ಸಾರ. ಈ ಎಲ್ಲ ಗುಣಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಿರುಪಮಾ ರಾವ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಲಪತಿ ಡಾ. ಸಂಜಯ್ ಆರ್. ಚಿಟ್ನಸ್, ಪ್ರೊ.ಚಾನ್ಸಲರ್‌ ಉಮೇಶ್ ಎಸ್. ರಾಜು, ಕುಲಸಚಿವ ಡಾ. ಎಂ. ಧನಂಜಯ ಮತ್ತಿತರರಿದ್ದರು.