ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ಕಸ್ತೂರಿ ರಂಗನ್ ವರದಿ ಪ್ರಕಾರ ಒತ್ತುವರಿ ತೆರವು ಸಂಬಂಧ ಮಲೆನಾಡಿನಲ್ಲಿ ಉಂಟಾಗಿರುವ ಜ್ವಲಂತ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಸೆ.1 ರಂದು ಬಾಳೆಹೊನ್ನೂರಿನಲ್ಲಿ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ ಎಂದು ಮಲೆನಾಡು - ಕರಾವಳಿ ಜನಪರ ಒಕ್ಕೂಟ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದ್ದಾರೆ.ಈ ಹಿಂದಿನಿಂದಲೂ ಸಂಘಟನೆಯಿಂದ ಮಲೆನಾಡಿನ ನಿವಾಸಿಗಳ ಧ್ವನಿಯಾಗುವ ಕೆಲಸ ಮಾಡಿದ್ದೇವೆ. ಪ್ರಸ್ತುತ ಒತ್ತುವರಿ, ಕಸ್ತೂರಿ ರಂಗನ್ ವರದಿ ಸಮಸ್ಯೆ ಮಲೆನಾಡಿಗರನ್ನು ಕಾಡುತ್ತಿದೆ. ಇದರ ಪರಿಹಾರಕ್ಕಾಗಿ ಬಾಳೆಹೊನ್ನೂರಿನ ರೇಣುಕಾ ಚಾರ್ಯ ಸಭಾ ಭವನದಲ್ಲಿ ಸೆ.೦೧ರ ಬೆಳಿಗ್ಗೆ ೧೦ಕ್ಕೆ ಮಲೆನಾಡಿಗರ ಸಭೆ ಕರೆಯಲಾಗಿದೆ. ಇದು ಜಯಕಾರ, ದಿಕ್ಕಾರದ, ವಿರದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜಕಾರಣ ರಹಿತ ಪಕ್ಷಾತೀತ, ಜಾತ್ಯತೀತ ಸಭೆ. ಮುಕ್ತವಾಗಿ ಎಲ್ಲರು ಭಾಗವಹಿಸಿ ಅಭಿಪ್ರಾಯ ಹಂಚಿಕೊಳ್ಳ ಬಹುದು ಎಂದು ತಿಳಿಸಿದರು.ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಕಾನೂನಾತ್ಮಕ, ಸಂವಿಧಾನಿಕ ಹೋರಾಟದ ಆಗತ್ಯವಿದೆ. ನ್ಯಾಯಾಲಯ, ಸದನ, ಸಂಸತ್‌ನಲ್ಲಿ ಈ ಸಮಸ್ಯೆ ಬಗೆಹರಿಯಬೇಕಾಗಿದೆ. ಆದ್ದರಿಂದ ವ್ಯವಸ್ಥಿತ ದಾಖಲೆಗಳನ್ನು ಇಟ್ಟುಕೊಂಡು, ಇಲ್ಲಿನ ನೆಲವಾಸಿಗಳ ಸಮಸ್ಯೆಗಳನ್ನು ದೊಡ್ಡ ಮಟ್ಟದಲ್ಲಿ ತಿಳಿಸುವ ಕೆಲಸ ಮಾಡಬೇಕು.ಈ ನಿಮಿತ್ತ ಆರಂಭಿಕವಾಗಿ ಸಭೆ ನಡೆಸಿ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿ ಒಟ್ಟಾಗಿ ಹೆಜ್ಜೆ ಹಾಕುವ ಪ್ರಯತ್ನಿಸಬೇಕಿದೆ. ಶಿರಸಿಯ ಅರಣ್ಯ ಹಕ್ಕು ಹೋರಾಟ ಸಮಿತಿ ರವೀಂದ್ರ ನಾಯಕ್ ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಬಾಗವಹಿಸಲಿದ್ದಾರೆ ಎಂದರು.
ಹವಾಮಾನ ವೈಪರೀತ್ಯದಿಂದ ಏನೇ ಸಮಸ್ಯೆ ಉದ್ಭವಿಸಿದ್ದರೂ ಸಹ ಮಲೆನಾಡಿನ ಕಡೆ ಬೊಟ್ಟು ಮಾಡುವ ಕೆಲಸ ವಾಗುತ್ತಿದೆ. ಇದು ನಿಲ್ಲಬೇಕು. ಉತ್ತರ ಕನ್ನಡ ಶಿರೂರು ಘಟನೆಗೆ ಅವೈಜ್ಞಾನಿಕ ಕಾಮಗಾರಿ ಕಾರಣವೆ ಹೊರತು ರೈತ ಒತ್ತುವರಿ ಕಾರಣವಲ್ಲ ಎಂದ ಅವರು, ಮಲೆನಾಡಿನಲ್ಲಿ ಆಕೇಶಿಕಾ, ಸಿಲ್ವರ್ ಇನ್ನಿತರ ಗಿಡಗಳನ್ನು ಬೆಳೆದು ಕಾಡು ಹಾಳು ಮಾಡಿರುವುದು ಅರಣ್ಯ ಇಲಾಖೆ ಹೊರತು ಕೃಷಿಕನಲ್ಲ. ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕು.ಮಲೆನಾಡಿನಲ್ಲಿ ಸಮಸ್ಯೆಳ ಬಗ್ಗೆ ಈವರೆಗೂ ಗಟ್ಟಿಯಾದ ಧ್ವನಿ ಕೇಳಿ ಬಂದಿಲ್ಲ. ಈ ಬಾರಿ ನಮ್ಮ ಧ್ವನಿ, ನಮ್ಮ ಹಕ್ಕಿಗಾಗಿ ಒಂದಾಗಿ ಮೊಳಗಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಪ್ರಮುಖರಾದ ರವೀಂದ್ರ ಕುಕ್ಕುಡಿಗೆ, ನವೀನ್ ಕರುವಾನೆ, ಎಂ.ಆರ್ ರವಿಶಂಕರ್, ಪ್ರಶಾಂತ್ ಹೊಸೂರು, ಮನು,ಮಂಜುನಾಥ್ ಮಾಳುರುದಿಣ್ಣೆ ರಮೇಶ್ ನವೀನ್ ಎಂ,ಕಟ್ಟೆ ಮುಂತಾದವರಿದ್ದರು.;Resize=(128,128))
;Resize=(128,128))
;Resize=(128,128))