ಸಾರಾಂಶ
- ಬಹು ಅಂಗಾಂಗ ವೈಫಲ್ಯದಿಂದ ಮಹಿಳೆ ಸಾವು: ಸರ್ವೇಕ್ಷಣಾಧಿಕಾರಿ ಹೇಳಿಕೆ
- ಮೃತ ಮಹಿಳೆ ಮನೆ, ಸುತ್ತಮುತ್ತಲ ಪೈಪ್, ನಲ್ಲಿ ನೀರಿನ 4 ಮಾದರಿಗಳ ಪರೀಕ್ಷೆ- ನೀರಿನ ಮಾದರಿಗಳಲ್ಲಿ ಸೂಕ್ಷ್ಮಾಣು ಪತ್ತೆಯಾಗಿಲ್ಲ: ಜಿಲ್ಲಾ ಜನಾರೋಗ್ಯ ಪ್ರಯೋಗ ಶಾಲೆ
- ವಾಂತಿ- ಭೇದಿ ಪ್ರಕರಣ ಕಂಡುಬಂದು 20 ಜನರು ಚಿಕಿತ್ಸೆ ಪಡೆದಿದ್ದರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಣಸಘಟ್ಟ ಗ್ರಾಮದಲ್ಲಿ ಕಳೆದ ವಾರ ವಾಂತಿ- ಭೇದಿ ಪ್ರಕರಣ ಕಂಡುಬಂದು, 20 ಜನರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ಒಬ್ಬ ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿಲ್ಲ. ಬಹು ಅಂ ಗಾಂಗ ವೈಫಲ್ಯದಿಂದ ಮಹಿಳೆ ಮರಣ ಸಂಭವಿಸಿದೆ ಎಂಬುದು ದೃಢಪಟ್ಟಿದೆ.ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದವರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 9 ರೋಗಿಗಳು ಸ್ಥಳೀಯ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 11 ರೋಗಿಗಳು ಶಿವಮೊಗ್ಗದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮದ 59 ವರ್ಷದ ಒಬ್ಬ ಮಹಿಳೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಸ್ಟ್ 24ರಂದು ಮೃತಪಟ್ಟಿದ್ದರು. ಈ ಮರಣ ಪ್ರಕರಣ ತೀವ್ರ ತರಹದ ಸೋಂಕಿನಿಂದ ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.ಮೃತ ಮಹಿಳೆಯ ಮನೆ ಹಾಗೂ ಸುತ್ತಮುತ್ತಲು ಸರಬರಾಜು ಮಾಡುವ ಪೈಪ್ ಮತ್ತು ನಲ್ಲಿ ನೀರಿನ 4 ಮಾದರಿಗಳನ್ನು ಜಿಲ್ಲಾ ಜನಾರೋಗ್ಯ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಲಾಯಿತು. ಈ 4 ನೀರಿನ ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣುಗಳೂ ಕಂಡುಬಂದಿಲ್ಲ. ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿಲ್ಲ. ಅವರು ತೀವ್ರ ತರಹದ ಬಹು ಅಂಗಾಂಗ ವೈಫಲ್ಯದಿಂದ ಮರಣ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ಈ ಗ್ರಾಮದ ಎಲ್ಲ ನೀರಿನ ಮೂಲಗಳನ್ನು ಕ್ಲೋರಿನೇಷನ್ ಮಾಡಲಾಗಿದೆ. ಪರ್ಯಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.
- - -