ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗಾನ ಕೋಗಿಲೆ ಎಸ್.ಜಾನಕಿ ನಿಧನಕ್ಕೆ ಪಟ್ಟಣದ ರೋಟರಿ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೋಟರಿ ಕ್ಲಬ್ ಹಾಗೂ ಅಚೀವರ್ಸ್ ಅಕಾಡೆಮಿಯಿಂದ ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಜಾನಕಿ ಅವರ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿಗಾಗಿ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಜಾನಕಮ್ಮರ ಭಾವಚಿತ್ರ ಹಿಡಿದು ಮೌನ ಮೆರವಣಿಗೆ ನಡೆಸಿದರು.

ನಂತರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರಾಘವೇಂದ್ರ ಮಾತನಾಡಿ, ಗಾನ ಕೋಗಿಲೆ ಎಸ್.ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಅವರ ಧ್ವನಿ ಎಂದಿಗೂ ಅಮರ. ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ಅಮರ ಗೀತೆಗಳು ಎಂದೆಂದಿಗೂ ಸಂಗೀತ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ. ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ವೇಳೆ ರೋಟರಿ ಅಧ್ಯಕ್ಷ ಎನ್.ನಾಗೇಂದ್ರ, ಅಲಯನ್ಸ್ ಅಧ್ಯಕ್ಷ ಆಶಾಲತಾ ಪುಟ್ಟೆಗೌಡ, ಗುರುಪ್ರಸಾದ್, ರಾಜಗೋಪಾಲ್, ಕಾರ್ತಿಕ್, ಭೂಮಿಕಾ, ಶಾಂಭವಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.ಒಂದು ಶಾಲೆ ನಿರ್ಮಾಣ ದೇವಸ್ಥಾನ ಕಟ್ಟಿಸಿದಷ್ಟೆ ಪುಣ್ಯದ ಕೆಲಸ: ಯೋಗಾನಂದ ಮೂರ್ತಿ


ದೇವಲಾಪುರ:ಒಂದು ಶಾಲೆ ನಿರ್ಮಾಣ ಮಾಡುವ ನೂರಾರು ದೇವಾಲಯಗಳನ್ನು ಕಟ್ಟಿಸಿದಷ್ಟೇ ಪುಣ್ಯದ ಕೆಲಸವಾಗಿದೆ ಎಂದು ಬೆಂಗಳೂರು ಉಪತಹಸೀಲ್ದಾರ್, ದಾನಿಗಳಾದ ಯೋಗಾನಂದ ಮೂರ್ತಿ ತಿಳಿಸಿದರು.

ನಾಗಮಂಗಲ ತಾಲೂಕಿನ ಹರದನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಹಳೆಯ ಕಟ್ಟಡಗಳನ್ನು ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಒಂದು ಶಾಲೆ ನಿರ್ಮಾಣದಿಂದ ಓದುತ್ತಿರುವ ಮಕ್ಕಳು ನೂರಾರು ದೇವರುಗಳಿಗೆ ದೇವಾಲಯಗಳ ನಿರ್ಮಾಣ ಮಾಡಿದಷ್ಟೇ ಪುಣ್ಯದ ಕೆಲಸ ಸಾರ್ಥಕವಾಗುತ್ತದೆ. ಜೀವನದಲ್ಲಿ ಸಮಾಜದಲ್ಲಿ ಎಲ್ಲರನ್ನೂ ಮೆಚ್ಚಿಸುವ ಕೆಲಸವಾಗದೆ ಇದ್ದರೂ ನಮ್ಮಗಳ ಮನಸ್ಸಿಗೆ ನೆಮ್ಮದಿ ತರುವ ಕರ್ತವ್ಯ ಮಾಡಿದರೆ ಸಮಾಜ ಸಮುದಾಯ ಅಭಿವೃದ್ಧಿ ಯಾಗಲು ಸಾಧ್ಯ ಎಂದರು.

ಮುಖ್ಯ ಸಿಕ್ಷಕ ಚಿಕ್ಕ ಬೋರಯ್ಯ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪೋಷಕರು, ಸಾರ್ವಜನಿಕರು ಸಹಕಾರ, ದಾನಿಗಳ ನೀಡುವ ಅನುದಾನದಿಂದ ಶಿಕ್ಷಣ ರಂಗದಲ್ಲಿ ಮಕ್ಕಳು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದರು.ಈ ವೇಳೆ ವರ್ಗಾವಣೆಗೊಂಡ ಶಿಕ್ಷಕರಾದ ಪರಶಿವಮೂರ್ತಿ ಗಣಿತ ಶಿಕ್ಷಕರು. ಟಿ.ಎಂ.ಶೃುತಿ ಆಂಗ್ಲಭಾಷಾ ಶಿಕ್ಷಕಿ ಅವರನ್ನು ಅಬಿನಂದಿಸಲಾಯಿತು. ಸಮಾರಂಭದಲ್ಲಿ ಕೆ.ಎನ್.ರಮೇಶ್‌, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರಾದ ರಾಜಕುಮಾರ, ಕೆ.ಮಂಜುನಾಥ್, ಎಂ.ಎಲ್.ಸುನೀತ, ಸಚಿನ್ ಉಪಸ್ಥಿತರಿದ್ದರು. ಗಣ್ಯರನ್ನು ಸಾಧಿಕ್ ಅಹಮದ್ ವಂದಿಸಿದರು.