ಸಾರಾಂಶ
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವೀರಶೈವ ಲಿಂಗಾಯತ ಹಾಗೂ ಇನ್ನಿತರ ಸಮಾಜದ ಏಳಿಗೆಗೆ ಶ್ರಮಿಸಿ ಸಮಾಜದ ಅಭಿವೃದ್ಧಿಗೆ ಕಾರ್ಯನಿರ್ವಹಿಸಿ ಪಂಚಾಕ್ಷರಿ ಅವರು ಜನಜನಿತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಬಸವಪಟ್ಟಣ ಗ್ರಾಮದ ಸಮಾಜ ಸೇವಕರು, ವಿಶ್ವ ವೀರಶೈವ- ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಂಚಾಲಕರು ಹಾಗೂ ಜೆ.ಎಸ್.ಎಸ್. ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಸವಪಟ್ಟಣದ ಬಿ.ಆರ್. ಪಂಚಾಕ್ಷರಿ ಅವರನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸಂಜೆ ನಡೆದ ನೇತಾಜಿ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಪರಿಪೂರ್ಣ ಪ್ರತಿಷ್ಠಾನ ಪೌಂಡೇಷನ್ (ರಿ) ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ 2024ರ ಸಾಲಿನ ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಸುತ್ತೂರಿನ ಜೆಎಸ್ಎಸ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಂಚಾಕ್ಷರಿ ಅವರಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಸನ್ಮಾನಿಸಿದರು.
ಚಿತ್ರದುರ್ಗ ಬಣಜಿಗ ಸಮಾಜದ ಅಧ್ಯಕ್ಷ ಬಿ. ಆರ್. ಬಸವರಾಜ್, ಪರಿಸರ ಸಂರಕ್ಷಕರು ಹಾಗೂ ಸಮಾಜ ಸೇವಕ ಡಾ. ಪುಣ್ಯಕೋಟಿ ಶ್ರೀನಿವಾಸ್, ಶಿಕ್ಷಕ ಪರಶಿವಮೂರ್ತಿ ಎನ್ ಪಿ., ಇನ್ನಿತರ ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.ಪಂಚಾಕ್ಷರಿ ಅವರ ಸಾಧನೆ:
ರಾಮನಾಥಪುರ ಹೋಬಳಿ ಬಸವಪಟ್ಟಣ ಗ್ರಾಮದ ಸಮಾಜ ಸೇವಕರು ಹಾಗೂ ಜೆ.ಎಸ್.ಎಸ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಕ್ಷರಿ ಅವರು, ಈಗಾಗಲೇ ರಾಜ್ಯದಲ್ಲೆಡೆ ವೀರಶೈವ ಲಿಂಗಾಯತ ಸಮಾಜದ ವಟುಗಳಿಗೆ ಶ್ರೀ ಶಿವರಾತ್ರೇಶ್ವರ ಧಾರ್ಮಿಕ ದತ್ತಿ ಶ್ರೀ ಸೋಮಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಪಾಲ್ಗೊಂಡು ಸುಮಾರು 92 ಸಾವಿರಕ್ಕೂ ಹೆಚ್ಚು ವಟುಗಳಿಗೆ ಲಿಂಗಧಾರಣೆ ಮಾಡಿಸಿದ್ದಾರೆ. ಅಲ್ಲದೇ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವೀರಶೈವ ಲಿಂಗಾಯತ ಹಾಗೂ ಇನ್ನಿತರ ಸಮಾಜದ ಏಳಿಗೆಗೆ ಶ್ರಮಿಸಿ ಸಮಾಜದ ಅಭಿವೃದ್ಧಿಗೆ ಕಾರ್ಯನಿರ್ವಹಿಸಿ ಪಂಚಾಕ್ಷರಿ ಅವರು ಜನಜನಿತರಾಗಿದ್ದಾರೆ.ಅಭಿನಂದನೆ:
ಸಮಾಜ ಸೇವಕ ಬಿ. ಆರ್. ಪಂಚಾಕ್ಷರಿ ಅವರು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೇತಾಜಿ ಚಾರಿಟೇಬಲ್ ಟ್ರಸ್ಟ್ ಮತ್ತು ಪರಿಪೂರ್ಣ ಪ್ರತಿಷ್ಠಾನ ವತಿಯಿಂದ ಇವರ ಸಾಧನೆ ಗೌರವಿಸಿ, 2024ರ ಸಾಲಿನ ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡಿರುವುದಕ್ಕೆ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮುಂತಾದವರು ಅಭಿನಂದನೆ ಸಲ್ಲಿಸಿದರು.----