ತುಂಗಾ ಪತ್ತಿನ ಸಂಘಕ್ಕೆ 4.41 ಲಕ್ಷ ನಿವ್ವಳ ಲಾಭ

| Published : Sep 25 2025, 01:00 AM IST

ಸಾರಾಂಶ

ತುಂಗಾ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ₹4.41 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘವು 1989ರಲ್ಲಿ ಸ್ಥಾಪನೆಯಾಗಿದ್ದು, ಹೊನ್ನಾಳಿ ಟೌನ್ ಸೇರಿದಂತೆ ಸುತ್ತಮುತ್ತ 12 ಕಿ.ಮೀ. ವ್ಯಾಪ್ತಿಯಲ್ಲಿ ವ್ಯವಹಾರ ಚಟುವಟಿಕೆ ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಿ.ಎಚ್. ಗೋಪಾಲಪ್ಪ ಹೇಳಿದ್ದಾರೆ.

- 37ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಗೋಪಾಲಪ್ಪ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತುಂಗಾ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ₹4.41 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘವು 1989ರಲ್ಲಿ ಸ್ಥಾಪನೆಯಾಗಿದ್ದು, ಹೊನ್ನಾಳಿ ಟೌನ್ ಸೇರಿದಂತೆ ಸುತ್ತಮುತ್ತ 12 ಕಿ.ಮೀ. ವ್ಯಾಪ್ತಿಯಲ್ಲಿ ವ್ಯವಹಾರ ಚಟುವಟಿಕೆ ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಿ.ಎಚ್. ಗೋಪಾಲಪ್ಪ ಹೇಳಿದರು.

ಪಟ್ಟಣದ ಹಿರೇಕಲ್ಮಠ ಸಮುದಾಯ ಭವನದಲ್ಲಿ ಮಂಗಳವಾರ ಸಂಘದ 37ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಒಟ್ಟು 3977 ಸದಸ್ಯರಿದ್ದು, ಒಟ್ಟು ₹1 ಕೋಟಿ ಷೇರು ಬಂಡವಾಳ ಹೊಂದಿದೆ. ಸಂಘದಲ್ಲಿ ಪಿಗ್ಮಿ ಠೇವಣಿ, ಕಾಯಂ ಠೇವಣಿ, ಸಿಬ್ಬಂದಿ ಭದ್ರತಾ ಠೇವಣಿ, ಸಿಬ್ಬಂದಿ ಭವಿಷ್ಯ ನಿಧಿ ಠೇವಣಿ ಹಾಗೂ ಉಳಿತಾಯ ಠೇವಣಿ ಸೇರಿ ಒಟ್ಟು ₹6.46 ಕೋಟಿ ಠೇವಣಿಗಳನ್ನು ಹೊಂದಿದೆ. ಸುಮಾರು ₹8.21 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು.

ಗ್ರಾಮೀಣ ಪ್ರದೇಶದ ಷೇರುದಾರರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮೀಣ ಸದಸ್ಯರು ಆರೋಪಗಳ ಮಾಡಿದರು. ಆಗ ಸಂಘದ ನಿರ್ದೇಶಕರಾದ ಎಸ್. ಶ್ರೀನಿವಾಸ್, ರಾಘವೇಂದ್ರ ಹಾಗೂ ಟಿ.ಎನ್. ಸುರೇಶ್ ಮಾತನಾಡಿ, ಷೇರುದಾರರ ಎಲ್ಲ ದೂರುಗಳನ್ನು ಸ್ವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದ ಕಾರ್ಯದರ್ಶಿ ಸಂತೋಷ್, ಸಿಬ್ಬಂದಿ ಮಂಜುನಾಥ್ ಜಾಧವ್ ಸಭೆಯನ್ನು ನಡೆಸಿಕೊಟ್ಟರು.

ಸಂಘದ ನಿರ್ದೇಶಕರಾದ ಎಚ್.ಬಿ. ಪುನೀತ್, ಎಚ್.ಎ. ಅಶೋಕ್, ಎ.ಕೆ. ತಿಮ್ಮೇಶ್, ಬಸವರಾಜಪ್ಪ, ಬಿ.ಪಿ. ಅಶೋಕ್, ಎನ್.ರಾಜೇಂದ್ರ, ಜಯಮ್ಮ ಬಸವನಗೌಡ, ಕೆ.ವಿ. ಚನ್ನಮ್ಮ ವಿರೂಪಾಕ್ಷಿ, ಚಂದ್ರಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

- - -

(ಕೋಟ್‌) ತುಂಗಾ ಪತ್ತಿನ ಸಂಘ ಸಂಘವು ಡಿಸಿಸಿ ಬ್ಯಾಂಕ್ ಷೇರು, ಡಿಸಿಸಿ ಬ್ಯಾಂಕ್ ಆಪದ್ಧನ ನಿಧಿ, ಡಿಸಿಸಿ ಬ್ಯಾಂಕ್ ಪಿ.ಎಫ್., ಕೆವಿಡಿ ಸಿಬ್ಬಂದಿ, ಡಿಸಿಸಿ ಬ್ಯಾಂಕ್‌ನಲ್ಲಿ ಎಫ್.ಡಿ. ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಷೇರು ಸೇರಿ ಒಟ್ಟು ₹1.36 ಕೋಟಿ ವಿನಿಯೋಗ ಮಾಡಿದೆ. ಸುಮಾರು ₹6.19 ಕೋಟಿ ಸಾಲದ ಮೊತ್ತವು ಸದಸ್ಯರಿಂದ ಬರಬೇಕಾಗಿದೆ. ಸಾಲದ ವಸೂಲಾತಿಗೆ ಅಮಲ್ಜಾರಿ ನೋಟೀಸ್ ನೀಡಿದ್ದು, ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ.

- ಬಿ.ಎಚ್. ಗೋಪಾಲಪ್ಪ, ಅಧ್ಯಕ್ಷ.

- - -

-24ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘದ 37ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಗೋಪಾಲಪ್ಪ ಮಾತನಾಡಿದರು.