ಚಿಕ್ಕಮಗಳೂರುಆಧುನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅಲೈಡ್ ಹೆಲ್ತ್ ಸೈನ್ಸ್(ಎಎಚ್‌ಎಸ್) ಕೋರ್ಸ್ ಬಹಳ ಮಹತ್ವ ಪೂರ್ಣವಾದುದಾಗಿದೆ ಎಂದು ಆಶ್ರಯ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಅನಿಕೇತ್ ವಿಜಯ್ ಬಾಳೆಗದ್ದೆ ಅಭಿಪ್ರಾಯಪಟ್ಟರು.
ಹೃದ್ರೋಗ ತಜ್ಞ ಡಾ.ಅನಿಕೇತ್ ವಿಜಯ್ ಬಾಳೆಗದ್ದೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಆಧುನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅಲೈಡ್ ಹೆಲ್ತ್ ಸೈನ್ಸ್(ಎಎಚ್‌ಎಸ್) ಕೋರ್ಸ್ ಬಹಳ ಮಹತ್ವ ಪೂರ್ಣವಾದುದಾಗಿದೆ ಎಂದು ಆಶ್ರಯ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಅನಿಕೇತ್ ವಿಜಯ್ ಬಾಳೆಗದ್ದೆ ಅಭಿಪ್ರಾಯಪಟ್ಟರು.ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022-23ನೇ ಶೈಕ್ಷಣಿಕ ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಎಎಚ್‌ಎಸ್ ಕೋರ್ಸ್ ಪಡೆದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ನಿರಂತರ ಅಧ್ಯಯನ, ದಯೆ ಮತ್ತು ಪರಿಣತಿಯೊಂದಿಗೆ ವೃತ್ತಿಗೆ ಗೌರವ ತಂದುಕೊಡಬೇಕು ಎಂದರು.ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಎಂ.ಆರ್.ಹರೀಶ್ ಮಾತನಾಡಿ, ಪ್ರಥಮ ವರ್ಷದ ಎಎಚ್‌ಎಸ್ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸೆ ವ್ಯಕ್ತಪಡಿಸಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವಲ್ಲಿ ಬದ್ಧತೆ ಹೊಂದಿದೆ ಎಂದರು.
ಎಎಚ್‌ಎಸ್ ಕೋರ್ಸಿನ ಸಂಯೋಜಕಿ ಡಾ.ಜೆ.ಲಾವಣ್ಯ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಜಿಲ್ಲಾ ಸರ್ಜನ್ ಡಾ.ಎಚ್.ಬಿ.ಚಂದ್ರಶೇಖರ್, ಡಾ.ಚಂದ್ರಶೇಖರ ಸಾಲಿಮಠ, ಆರ್‌ಎಂಒ ಡಾ.ಬಿ.ಎಲ್.ಕಲ್ಪನ, ಆರ್ಥಿಕ ಸಲಹೆಗಾರರಾದ ಸರಿತಾ, ನೋಡಲ್ ಅಧಕಾರಿ ಡಾ.ಲೋಹಿತ್ ಕುಮಾರ್, ಡಾ.ಶ್ರೀನಿವಾಸ್ ಆರ್.ದೇಶಪಾಂಡೆ, ಡಾ.ಎಂ.ಕೆ.ಯುವರಾಜ್, ಡಾ.ಶ್ರೀನಿವಾಸಮೂರ್ತಿ, ಡಾ.ಕೆ.ಎನ್.ಶ್ರೀಚರಣ್, ಡಾ.ಕೆ.ಪ್ರಜ್ವಲ್, ಕೆ.ಜೆ.ಜಾಸ್ಮಿನ್, ಡಾ.ಪ್ರೀತಿ ಉಪಸ್ಥಿತರಿದ್ದರು.ಫೋಟೋ ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಎಚ್‌ಎಸ್ ವಿದ್ಯಾರ್ಥಿಗಳಿಗೆ ಪ್ರಥಮ ಪದವಿ ಪ್ರದಾನ ಮಾಡಲಾಯಿತು.