ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷೆಯಲ್ಲಿ ಅನುಷ್ಠಾನ ಸಮಿತಿ ಸಭೆ ನಡೆಯಿತು. | Kannada Prabha
Image Credit: KP
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ನಾಗೂರ ರಸ್ತೆಯ ಗಂಗಾಸಿಂಗ ರಜಪೂರ ತೋಟದ ಮನೆಯ ಮುಂದಿನ ರಸ್ತೆ ಮೇಲೆ ಬೈಕ್ ಎರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ನಾಗೂರ ರಸ್ತೆಯ ಗಂಗಾಸಿಂಗ ರಜಪೂರ ತೋಟದ ಮನೆಯ ಮುಂದಿನ ರಸ್ತೆ ಮೇಲೆ ಬೈಕ್ ಎರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಪಟ್ಟಣದಿಂದ ನಾಗೂರ ಗ್ರಾಮದ ಕಡೆಯಿಂದ ತೆರಳುತ್ತಿದ್ದ ಸಂಗಯ್ಯ ಸಂಗನಬಸಯ್ಯ ಹಿರೇಮಠ (22) ಹಾಗೂ ನಾಗೂರ ಗ್ರಾಮದಿಂದ ಪಟ್ಟಣದ ಕಡೆಗೆ ಬರುತ್ತಿದ್ದ ನಾಗೂರ ಗ್ರಾಮದ ಶಾಹೀದ ಲಾಲಸಾಬ ಹುಬ್ಬಳ್ಳಿ (24) ಅಸುನೀಗಿದವರು. ಇಬ್ಬರಿಗೂ ತಲೆ, ಮುಖಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪಿಐ ಗುರುಶಾಂತ ದಾಶ್ಯಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.