ಉಡುಪಿ: ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಉಡುಪಿ ಜಿಲ್ಲೆಯ ವತಿಯಿಂದ ನೂತನವಾಗಿ ಅಧಿಕಾರ ಸ್ವೀಕರಿಸಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಭೇಟಿಯ ವೇಳೆ ವಿವಿಧ ಸಭೆಗಳ ಸಭಾಪಾಲಕರು ಮತ್ತು ಧರ್ಮಾಧ್ಯಕ್ಷರು ಪರಸ್ಪರ ಕ್ರೈಸ್ತ ಐಕ್ಯತೆಯ ಕುರಿತು ಚರ್ಚೆಗಳನ್ನು ನಡೆಸಿದರು. ನೂತನ ಧರ್ಮಾಧ್ಯಕ್ಷರು ಜಿಲ್ಲೆಯಲ್ಲಿ ಕೈಸ್ತ ಐಕ್ಯತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ತನ್ನ ಸಂಪೂರ್ಣವಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಸಿಎಸ್ ಐ ಸದರ್ನ್ ಡಯಾಸಿಸ್ ಕೋಶಾಧಿಕಾರಿ ವಂ. ಐವನ್ ಸೋನ್ಸ್, ವಲಯ ಸಭಾ ಪಾಲಕ ವಂ.ಕಿಶೋರ್ ಕುಮಾರ್, ಯುಬಿಎಂ ಚರ್ಚ್ ಮಣಿಪಾಲ ಸಭಾಪಾಲಕ ವಂ. ಸಂತೋಷ್, ಸಿಎಸ್ ಐ ಮಣಿಪುರ ಚರ್ಚಿನ ವಂ. ಪ್ರವೀಣ್ ಮಾಬೆನ್, ಯುಬಿಎಂಸಿ ಕಾರ್ಯದರ್ಶಿ ಕ್ರಿಸ್ಟೋಫರ್, ಫುಲ್ ಗೊಸ್ಪಲ್ ಸಭೆಯ ಪಾಸ್ಟರ್ ಕೆ. ವಿ. ಪಾವ್ಲ್ ಮತ್ತು ಅಶೋಕ್, ಸಿರೋ ಮಲಂಕರ ಬೈಂದೂರಿನ ವಂ.ಡೇವಿಡ್, ವಂ.ಫಿಲಿಪ್, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕರಾದ ವಂ. ಲಿಯೋ ಪ್ರವೀಣ್, ವಿವಿಧ ಸಭೆಗಳ ಮುಖಂಡರು ಇದ್ದರು.