ಉಡುಪಿ: 5ರಂದು ಜಿಲ್ಲೆಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

| Published : Jun 02 2024, 01:46 AM IST

ಸಾರಾಂಶ

ಎಚ್.ಟಿ/ಎಲ್.ಟಿ ವಾಹಕ ಬದಲಾವಣೆ, ಟ್ರೀ ಕಟ್ಟಿಂಗ್, ಎಚ್.ಟಿ. ಮಾರ್ಗ ನಿರ್ವಹಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಉಡುಪಿ: ಬ್ರಹ್ಮಾವರ ಉಪವಿದ್ಯುತ್‌ ಕೇಂದ್ರದಿಂದ ಹೊರಡುವ ಬ್ರಹ್ಮಾವರ, ಮಾಬುಕಳ, ಮಟಪಾಡಿ, ಉಪ್ಪೂರು, ಚೇರ್ಕಾಡಿ, ಕೊಕ್ಕರ್ಣೆ ಫೀಡರ್‌ ಮಾರ್ಗದಲ್ಲಿ ಹಾಗೂ ನಿಟ್ಟೂರು ಉಪವಿದ್ಯುತ್‌ ಕೇಂದ್ರದಿಂದ ಹೊರಡುವ ಕಲ್ಯಾಣಪುರ ಫೀಡರ್‌ ಮಾರ್ಗದಲ್ಲಿ ಎಚ್.ಟಿ/ಎಲ್.ಟಿ ವಾಹಕ ಬದಲಾವಣೆ, ಟ್ರೀ ಕಟ್ಟಿಂಗ್, ಎಚ್.ಟಿ. ಮಾರ್ಗ ನಿರ್ವಹಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿ ಜೂನ್‌ 5ರಂದು ನಡೆಯಲಿದೆ.

ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಹಂದಾಡಿ, ಬೇಳೂರು ಜೆಡ್ಡು, ಬ್ರಹ್ಮಾವರ, ರಥಬೀದಿ, ಚಾಂತಾರು, ವಾರಂಬಳ್ಳಿ, ಕುಮ್ರಗೋಡು, ಉಪ್ಪಿನಕೋಟೆ, ಬಾಳ್ತಾರು, ಸೂಲ್ಕುದ್ರು, ಮಟಪಾಡಿ, ಕೊಳಂಬೆ, ಹೈರಾಬೆಟ್ಟು, ಕೆ.ಜಿ.ರೋಡ್, ಸಾಲ್ಮರ, ಮಾಯಾಡಿ, ಅಮ್ಮುಂಜೆ, ಕೋಟೆರೋಡ್, ನಿಡಂಬಳ್ಳಿ, ಕಲ್ಯಾಣಪುರ, ಹೇರೂರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್‌ ಕಲಾಮಂದಿರ, ಕೆ.ಕೆ. ಫಾರ್ಮ್ಸ್, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ ಮತ್ತು ಸುತ್ತಮುತ್ತ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

* ಕಾಪು: ಬೆಳಪು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮಲ್ಲಾರು ಫೀಡರ್‌ ಮಾರ್ಗದಲ್ಲಿ ಹೊಸದಾಗಿ ಲಿಂಕ್‌ಲೈನ್‌ ಕಾಮಗಾರಿ ಜೂನ್‌ 5ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಮಲ್ಲಾರು, ಪಕೀರ್ಣಕಟ್ಟೆ, ಬೆಳಪು, ಮಜೂರು ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯವಾಗಲಿದೆ.* ಮಣಿಪಾಲ: ಮಣಿಪಾಲ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಇಂದ್ರಾಳಿ ಫೀಡರ್‌ ಮಾರ್ಗದಲ್ಲಿ ಹಾಗೂ ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಪೆರ್ಡೂರು ಫೀಡರ್‌ ಮಾರ್ಗದಲ್ಲಿ ಜೂನ್‌ 5ರಂದು ನಿರ್ವಹಣೆ ಕಾಮಗಾರಿ ನಡೆಲಿದೆ. ಅಂದು ಹಯಗ್ರೀವನಗರ, ಲಕ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಿಟ್ಟೂರು: ನಿಟ್ಟೂರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಅಂಬಲಪಾಡಿ ಮತ್ತು ಕುಂಜಿಬೆಟ್ಟು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಉಡುಪಿ-3 ಫೀಡರ್‌ನಲ್ಲಿ ಜೂನ್‌ 6ರಂದು ನಿರ್ವಹಣಾ ಕಾಮಗಾರಿ ನಡೆಯಲಿದೆ. ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಕಿನ್ನಿಮುಲ್ಕಿ, ಶೆಟ್ಟಿಗಾರ್‌ ಕಾಲನಿ, ಲೇಬರ್‌ ಕಾಲನಿ, ಡಿಲಿಮಾ ಲೇಔಟ್, ಮಾರುತಿ ವಿಥೀಕ, ಟೆಲಿಫೋನ್‌ ಎಕ್ಸ್‌ಚೇಂಜ್‌, ಹಳೆ ಕೆ.ಎಸ್.ಆರ್.ಟಿ.ಸಿ. ಬಸ್‌ ನಿಲ್ದಾಣ, ನ್ಯೂ ಸಿಟಿ ಆಸ್ಪತ್ರೆ ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.* ಕಾರ್ಕಳ: ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ ಚಾರ, ಶಿವಪುರ ಫೀಡರ್‌ನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿ ಜೂನ್‌ 6ರಂದು ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಹೆಬ್ರಿ ಪೇಟೆ, ಬಂಗಾರುಗುಡ್ಡೆ, ಗುಳಿಬೆಟ್ಟು, ಶಿವಪುರ, ಕೆರೆಬೆಟ್ಟು ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

* ಉಡುಪಿ: ಬೆಳಪು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮಲ್ಲಾರು ಫೀಡರ್‌ ಮಾರ್ಗದಲ್ಲಿ ಹೊಸದಾಗಿ ಲಿಂಕ್‌ಲೈನ್‌ ಕಾಮಗಾರಿ ಜೂನ್‌ 8ರಂದು ನಡೆಯಲಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಮಲ್ಲಾರು, ಪಕೀರ್ಣಕಟ್ಟೆ, ಬೆಳಪು, ಮಜೂರು ಮತ್ತು ಸುತ್ತಮುತ್ತ ವಿದ್ಯುತ್‌ ನಿಲುಗಡೆಯಾಗಲಿದೆ.