ಸಾರಾಂಶ
ಲಾಯಿಲದ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಭಾನುವಾರ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗದ 13ನೇ ವಾರ್ಷಿಕೋತ್ಸವ ನೆರವೇರಿತು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ನೂತನ ಕಾರ್ಯಕಾರಿ ಸಮಿತಿ ಘೋಷಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಆಧುನಿಕ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಂಡರೆ ಚಿತ್ಪಾವನ ಸಂಸ್ಕೃತಿ ಆಚರಣೆ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯವಿದೆ ಎಂದು ಬೆಳ್ತಂಗಡಿ ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆಯ ಉಪನ್ಯಾಸಕಿ ಡಾ.ವೃಂದಾ ಬೇಡೇಕರ್ ಅಭಿಪ್ರಾಯಪಟ್ಟಿದ್ದಾರೆ.ಲಾಯಿಲದ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಭಾನುವಾರ ನಡೆದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗದ 13ನೇ ವಾರ್ಷಿಕೋತ್ಸವದಲ್ಲಿ ಅತಿಥಿ ಸ್ಥಾನದಿಂದ ಮಾತನಾಡಿದರು.
ನಾವು ಸಾಮೂಹಿಕ ಆಚರಣೆಗಳಿಗೆ ಮಹತ್ವ ನೀಡಬೇಕು. ಚಿತ್ಪಾವನಿ ಆಚರಣೆಗಳಲ್ಲಿ ಪರಿಸರ ಸಂರಕ್ಷಿಸುವ ಕಾಳಜಿ ಇದೆ. ಸಮೂಹ ಮಾಧ್ಯಮಗಳು ನಮ್ಮ ಆಚರಣೆಗಳನ್ನು ಪ್ರಸಾರ ಮಾಡುತ್ತಿವೆಯಾದರೂ ಇಂದಿನ ತಂತ್ರಜ್ಞಾನದ ಯುಗದಲ್ಲಿ ಮತ್ತು ಬದಲಾಗುತ್ತಿರುವ ದೃಷ್ಟಿಕೋನದ ಮಧ್ಯದಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ನಡೆಯಬೇಕು ಎಂದರು.ಸಂಘದ ಗೌರವಾಧ್ಯಕ್ಷ ಶಂಕರ ಆರ್. ಪಟವರ್ಧನ್ ವಾರ್ಷಿಕೋತ್ಸವ ಉದ್ಘಾಟಿಸಿದರು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಅಡ್ಡಹಳ್ಳದ ಕೃಷಿಕ ಯೋಗೀಶ್ ದಾಮ್ಲೆ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಯೋಗೀಶ್ ಆರ್.ಭಿಡೆ ಅಧ್ಯಕ್ಷತೆ ವಹಿಸಿದ್ದರು. ಅಳದಂಗಡಿಯ ವೈದ್ಯ ಡಾ.ಎನ್.ಎಂ. ತುಳಪುಳೆ ಹಾಗೂ ಮುಂಡಾಜೆಯ ಕೃಷಿಕ ಸಚಿನ್ ಭಿಡೆ ಅವರನ್ನು ಸಮ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. ನೂತನ ಕಾರ್ಯಕಾರಿ ಸಮಿತಿ ಘೋಷಿಸಲಾಯಿತು.ಅಕ್ಕಿಮುಡಿ ಕಟ್ಟುವ ಪ್ರಾತ್ಯಕ್ಷಿಕೆಯೊಂದಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಬಳಗದ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ವಿ.ಶೆಂಡ್ಯೆ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಕಾಂತ ಗೋರೆ ಲೆಕ್ಕಪತ್ರ ವಾಚಿಸಿದರು. ಸದಸ್ಯ ಶೈಲೇಶ್ ಠೋಸರ್ ವಂದಿಸಿದರು. ಸ್ವಾತಿ ಫಡಕೆ ಹಾಗೂ ಸಿಂಧೂರ ಶೆಂಡ್ಯೆ ನಿರ್ವಹಿಸಿದರು.ಐತಿಹಾಸಿಕ ಸೀರೆ ಪ್ರದರ್ಶನ:
ಚಿತ್ಪಾವನ ಸಮುದಾಯದ ಪವಾಡ ಪುರುಷ ಅಪ್ಪಾ ಭಟ್ ದಾಮಲೆ ದಂಪತಿಗೆ 180 ವರ್ಷಗಳ ಹಿಂದೆ ಮೈಸೂರಿನ ಮಹಾರಾಜರು ಗೌರವಿಸಿ ನೀಡಿದ 20 ಮೊಳದ ಸೀರೆಯನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.