ಈ ದೇಶಕ್ಕೆ ಸುಶಾಸನ ನೀಡಿದ್ದ ಅಟಲ್ ಏಳು ಬಾರಿ ಸಂಸದರಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ, ಮೂರು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿ ಹಾಗೂ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಯಾವುದೇ ಬಗೆಯ ದ್ವೇಷವಿಲ್ಲದ ಅಜಾತಶತ್ರು.

ಕನ್ನಡಪ್ರಭ ವಾರ್ತೆ ಮದ್ದೂರು

ದೇಶ ಕಂಡ ಅಪ್ರತಿಮ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್ ಬಣ್ಣಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅವರು, ಈ ದೇಶಕ್ಕೆ ಸುಶಾಸನ ನೀಡಿದ್ದ ಅಟಲ್ ಏಳು ಬಾರಿ ಸಂಸದರಾಗಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ, ಮೂರು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿ ಹಾಗೂ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಯಾವುದೇ ಬಗೆಯ ದ್ವೇಷವಿಲ್ಲದ ಅಜಾತಶತ್ರು ಎಂದರು.

ವಾಜಪೇಯಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಸಜ್ಜಿತ ರಸ್ತೆ ಜಾಲ ವಿಸ್ತರಣೆ, ಬಡವರಿಗೆ ಅಂತ್ಯೋದಯ ಯೋಜನೆ ಅಡಿ ಅಕ್ಕಿ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ನೀಡಿ ಭಾರತದ ಶಕ್ತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ವ್ಯಕ್ತಿ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾ ಎಂ.ಸತೀಶ್, ಕೆಂಪ ಬೋರಯ್ಯ, ರೈತ ಮೋರ್ಚಾ ಅಧ್ಯಕ್ಷ ವಿ.ಎಚ್. ರವಿ, , ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಮಹಿಳಾ ಘಟಕದ ಮಮತಾ ರಾಂಕಾ, ತ್ರಿವೇಣಿ, ಪುರಸಭಾ ಮಾಜಿ ಸದಸ್ಯ ಧನಂಜಯ ಮತ್ತಿತರರು ಭಾಗವಹಿಸಿದ್ದರು.

ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬ ಆಚರಣೆ

ಮಳವಳ್ಳಿ: ಅಟಲ್ ಬಿಹಾರಿ ಬಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ ಪಟ್ಟಣದ ಪ್ರವಾಸಿ ಮಂದಿರದ ಉದ್ಯಾವನವನ್ನು ಮುಖಂಡರು ಸ್ವಚ್ಛಗೊಳಿಸಿದರು.

ಭಾರತದ ಪ್ರಧಾನಿಯಾಗಿ, ವಿದೇಶ ಸಚಿವರಾಗಿ, ಸಂಸತ್ತಿನ ಮುಖ್ಯ ಸ್ಥಾಯಿ ಸಮಿತಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರಾಗುವ ಜೊತೆಗೆ ಸಮಾಜಕ್ಕೆ ಹಲವಾರು ಕೊಡುಗೆ ನೀಡಿರುವ ವಾಜಪೇಯಿ ಅಮರವಾಗಲಿ ಎಂದು ಬಣ್ಣಿಸಿದರು.

ಬಿಜೆಪಿ ಮುಖಂಡರಾದ ಅಶೋಕ್ ಕುಮಾರ್, ಅಪ್ಪಾಜಿಗೌಡ, ಯಮದೂರು ಸಿದ್ದರಾಜು, ಕಪಿನಿಗೌಡ, ಮಧು ಗಂಗಾಧರ್, ಕೃಷ್ಣ, ಆನಂದ್,ಕ್ಯಾತನಹಳ್ಳಿ ಅಶೋಕ್, ಸಿದ್ದಲಿಂಗಸ್ವಾಮಿ, ಬಸವರಾಜು,ಕುಮಾರ್, ಮಹೇಂದ್ರ, ಕಾಂತರಾಜು, ಚಿಕ್ಕಣ್ಣ ಸೇರಿದಂತೆ ಹಲವರು ಇದ್ದರು.