ವಾಸುಕಿ ಸೌಹಾರ್ದ ಸಹಕಾರಿಗೆ ₹27 ಲಕ್ಷ ನಿವ್ವಳ ಲಾಭ

| Published : Sep 20 2025, 01:01 AM IST

ಸಾರಾಂಶ

₹2.47 ಕೋಟಿ ಠೇವಣಿಯನ್ನು ವಿವಿಧ ಬ್ಯಾಂಕುಗಳಲ್ಲಿ ಗುಂತಾವಣೆ ಮಾಡಲಾಗಿದೆ.

ಭಟ್ಕಳ: ಸರ್ಪನಕಟ್ಟೆಯ ವಾಸುಕಿ ಸೌಹಾರ್ದ ಸಹಕಾರಿ ಸಂಘದ 4ನೇ ವರ್ಷದ ಸರ್ವ ಸಾಧಾರಣಾ ಸಭೆ ಸಂಘದ ಅಧ್ಯಕ್ಷ ಗಜೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘವು ವರದಿ ಸಾಲಿನಲ್ಲಿ ₹66.49 ಲಕ್ಷ ಷೇರು ಬಂಡವಾಳ, ₹11 ಕೋಟಿ ಠೇವಣಿ, ₹9.24 ಕೋಟಿ ಸಾಲ ನೀಡಲಾಗಿದೆ. ₹27.28 ಲಕ್ಷ ನಿವ್ವಳ ಲಾಭ ದಾಖಲಿಸಿದೆ ಎಂದರು.

₹2.47 ಕೋಟಿ ಠೇವಣಿಯನ್ನು ವಿವಿಧ ಬ್ಯಾಂಕುಗಳಲ್ಲಿ ಗುಂತಾವಣೆ ಮಾಡಲಾಗಿದೆ. ದುಡಿಯುವ ಬಂಡವಾಳ ₹12 ಕೋಟಿಗೆ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಾಲದ ವಸೂಲಾತಿಯ ಪ್ರಮಾಣವು ಶೇ.99ರಷ್ಟಿದೆ. ಶಾಸನಬದ್ದ ಲೆಕ್ಕ ಪರಿಶೋಧಕರು ಸಂಘದ ಅಡಿಟ್ ವರ್ಗೀಕರಣವನ್ನು ''''''''ಅ'''''''' ವರ್ಗದಲ್ಲಿ ವರ್ಗೀಕರಿಸಿದ್ದಾರೆ. ಸದಸ್ಯರ ಬೇಡಿಕೆಯಂತೆ ನಗರದಲ್ಲಿ ರಂಗೀಕಟ್ಟೆ ಶಾಖೆಯನ್ನು ಶಿಫಾ ಕ್ರಾಸಿನ ಬಳಿ ಆರಂಭಿಸಲಾಗಿದೆ ಎಂದರು.

ಸದಸ್ಯರಿಗೆ ಸಂಘದಲ್ಲಿ ವ್ಯವಹಾರ ಮಾಡಲು ಅನುಕೂಲವಾಗುವ ಎಟಿಎಂ, ಸೇಫ್ ಡೆಪಾಸಿಟ್ ಲಾಕರ್, ನೋಮಿನೇಶನ್, ಆರ್.ಟಿ.ಜಿ.ಎಸ್/ನೆಫ್ಟ್ ಎಸ್.ಎಂ.ಎಸ್. ಲಭ್ಯವಿದೆ ಎಂದರು.

ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡುತ್ತಿರುವ ಇಬ್ಬರು ಸಾಲಗಾರ ಸದಸ್ಯರನ್ನು ಹಾಗೂ ಸಂಘದ ಹಿರಿಯ ಸ್ಥಾಪಕ ಷೇರುದಾರ ಸದಸ್ಯ ಸದಾಶಿವ ನಾರಾಯಣ ಗುಡಿಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿರ್ದೇಶಕ ನಾಗರಾಜ ಎಂ. ಮಾತನಾಡಿದರು. ಉಪಾಧ್ಯಕ್ಷ ನಾರಾಯಣ ಗೋವಾಳಿ, ನಿರ್ದೇಶಕರಾದ ಮಹಾದೇವ ಎನ್. ನಾಯ್ಕ, ಪ್ರಸನ್ನ ಅಣ್ಣಪ್ಪಯ್ಯ ಶೆಟ್ಟಿ, ಜಯಾ ಪ್ರಕಾಶ ಅಡಿಗ, ಗಣಪತಿ ಆಚಾರಿ, ಆಶಾ ವಿಶ್ವನಾಥ ಶೆಟ್ಟಿ, ಜ್ಯೋತಿ ಗುರುದತ್ ಶೇಟ್. ವೃತ್ತಿಪರ ನಿರ್ದೇಶಕ ಸಂತೋಷ ಆರ್.ಶೇಟ್ ಉಪಸ್ಥಿತರಿದ್ದರು. ನಿರ್ದೇಶಕ ಸುಭಾಷ ಎಂ. ಶೆಟ್ಟಿ ಆರ್ಥಿಕ ವರ್ಷದ ಕಾರ್ಯ ಚಟುವಟಿಕೆಯನ್ನು ಸಭೆಗೆ ವಿವರಿಸಿದರು. ಪ್ರಧಾನ ವ್ಯವಸ್ಥಾಪಕ ಕಿಶನ್ ಶೆಟ್ಟಿ ವಂದಿಸಿದರು.

ಭಟ್ಕಳದ ವಾಸುಕಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಮಾತನಾಡುತ್ತಿರುವ ಅಧ್ಯಕ್ಷ ಗಜೇಂದ್ರ ಶೆಟ್ಟಿ.