ತಾಲೂಕಿನ ಸಂಪಿಗೆಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜ್ಞಾನ ವಿಕಾಸ ಕಾರ್ಯಕ್ರಮದಡಿ ಕಡಬಸಮ್ಮಗೆ ವಾತ್ಸಲ್ಯ ಮನೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೂರದಹಳ್ಳಿ ಪ್ರಸಾದ್ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಸಂಪಿಗೆಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜ್ಞಾನ ವಿಕಾಸ ಕಾರ್ಯಕ್ರಮದಡಿ ಕಡಬಸಮ್ಮಗೆ ವಾತ್ಸಲ್ಯ ಮನೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೂರದಹಳ್ಳಿ ಪ್ರಸಾದ್ ಹಸ್ತಾಂತರಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ತೆರಕಣಾಂಬಿ ಯೋಜನಾ ಕಚೇರಿ ವ್ಯಾಪ್ತಿಯ ಕಬ್ಬಹಳಿ ವಲಯದ ಸಂಪಿಗೆಪುರದಲ್ಲಿ ನಿರ್ಮಿಸಿದ್ದ ವಾತ್ಸಲ್ಯ ಮನೆಯನ್ನು ಗ್ರಾಮದ ಯಜಮಾನರಾದ ಅಷ್ಟಾವರಣ ಮತ್ತು ಮಹದೇವಪ್ಪ ಹಸ್ತಾಂತರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಶಿಕುಮಾರ್, ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕೆ, ವಲಯ ಮೇಲ್ವಿಚಾರಕ ಯೋಗೀಶ್, ಸೇವಾ ಪ್ರತಿನಿಧಿಗಳಾದ ಗೌರಮ್ಮ, ನಾಗವೇಣಿ, ಸುಮ ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.---
೧೩ಜಿಪಿಟಿ೩ಗುಂಡ್ಲುಪೇಟೆ ತಾಲೂಕಿನ ಸಂಪಿಗೆಪುರ ಕಡಬಸಮ್ಮನಿಗೆ ವಾತ್ಸಲ್ಯ ಮನೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೂರದಹಳ್ಳಿ ಪ್ರಸಾದ್ ಉದ್ಘಾಟಿಸಿದರು.