ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವೀರಶೈವ ಸಮುದಾಯ ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರೆದ ಜನಾಂಗವಾಗಿದೆ. ಸಮಾಜ ಮತ್ತು ಮುಖಂಡರ ಘನತೆಗೆ ಕುಂದು ಬಂದರೆ ಒಕ್ಕೊರಲಿನಿಂದ ಪ್ರತಿಭಟಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ರೇಣುಕಾಶಿವಚಾರ್ಯ ಮಹಸ್ವಾಮೀಜಿ ಹೇಳಿದರು.ಪಟ್ಟಣದ ಕೋಟೆಬೀದಿಯ ಶ್ರೀನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ತಾಲೂಕು ವೀರಶೈವ ಮಹಾಸಭಾದ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ವೀರಶೈವ ಸಮಾಜ ಬೇರೆ ಜನಾಂಗಕ್ಕಿಂತಲ್ಲೂ ಬಲಿಷ್ಟವಾಗಿ ಬೆಳೆದಿದೆ. ಜನಾಂಗಕ್ಕೆ ಮೀಸಲಾತಿ ಹೋರಾಟ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಮೂಲಕ ತನ್ನ ಪಾಲಿನ ಹಕ್ಕನ್ನು ಪಡೆದುಕೊಳ್ಳಲು ಜನಾಂಗ ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದೆ. ಮುಂದೆಯೂ ಸಹಾ ಹೋರಾಟದಿಂದ ಜನಾಂಗ ಹಿಂದೆ ಸರಿಯಬಾರದು ಎಂದರು.ವೀರಶೈವ ಸಂಘ ಕೇವಲ ತೋರ್ಪಡಿಕೆ ಸಂಘವಾಗಿ ಉಳಿಯದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ಶೋಷಿತರಗಿರುವ ಜನಾಂಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದರಿಗೆ ಸರ್ಕಾರರದಿಂದ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಕಾರ್ಯೋನ್ಮುರಾಗಬೇಕೆಂದು ತಿಳಿಸಿದರು.
ಕಚೇರಿ ಉದ್ಘಾಟಿಸಿದ ಉದ್ಯಮಿ ಮಡೇನಹಳ್ಳಿ ಉಮಾಪತಿ ಮಾತನಾಡಿ, ವೀರಶೈವ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಯಾವುದೇ ಸಹಾಯ ಹಸ್ತ ನೀಡಲು ಸಿದ್ದನಿದ್ದೇನೆ ಸಮಾಜದ ಬಾಂಧವರು ಒಡಕಿನ ಸ್ವಭಾವ ಬಿಟ್ಟು ಸಂಘಟಿತರಾಗಬೇಕು. ಸಮಾಜದ ಜನರಿಗೆ ಕಿಂಚಿತ್ತಾದರು ನೆರವು ನೀಡುವ ಸಂಕಲ್ಪ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಾ ಸಮಾಜದ ಅಧ್ಯಕ್ಷ ತಾಳಶಾಸನ ಆನಂದ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಕೆಸ್ತೂರು ಗ್ರಾಮದ ಸಿ.ಜಿ.ಗೌರಿಶಂಕರ್, ನಿದೇಶಕರಾದ ಮದ್ದೂರಿನ ಪಿ.ರಾಜಶೇಖರ್, ಎಂ.ವೀರಭದ್ರಸ್ವಾಮಿ, ಎಚ್.ಬಿ.ಸ್ವಾಮಿ, ಕೆ.ಶಿವಕುಮಾರ್, ಬೂದಗುಪ್ಪೆ ಗ್ರಾಮದ ಬಿ.ಎಸ್.ಬಸವಲಿಂಗಶಾಸ್ತ್ರಿ, ಎಸ್.ಮರಿಲಿಂಗಪ್ಪ, ಬೆಸಗರಹಳ್ಳಿ ಬಿ.ಎಸ್.ನಾಗರಾಜು, ದೊಡ್ಡ ಅರಸಿನಕೆರೆ ಡಿ.ಎಂ.ರವಿಕುಮಾರ್, ಅಣ್ಣೂರು ಆರ್.ಸಿದ್ದಪ್ಪ, ಭಾರತೀನಗರ ಕೆ.ಎಸ್.ಸಿದ್ದೇಶ್ವರ್, ಕಾಡುಕೊತ್ತನಹಳ್ಳಿ ದಯಾನಂದ್, ಎಸ್.ಐ.ಹೊನ್ನಲಗೆರೆ ಎಚ್.ಆರ್.ರೇವಣ್ಣಸ್ವಾಮಿ, ಬಿದರಕೋಟೆ ಯೋಗೇಶ್ ಹಾಗೂ ಮಹಿಳಾ ನಿದೇಶಕರಾದ ಶಿವಪುರ ಶಿಲ್ಪಶ್ರೀ, ಭಾರತೀನಗರ ಜೆ.ಕವಿತಾ, ಮಡೇನಹಳ್ಳಿ ಎಂ.ಎಸ್.ನೇತ್ರಾವತಿ, ಕೆ.ಹೊನ್ನಲಗೆರೆ ಎಂ.ಎಸ್.ಮಂಜುಳಾ, ಭೀಮನಕೆರೆ ಶಶಿಕಲಾ, ಎಸ್.ಐ.ಹೊನ್ನಲಗೆರೆ ನಿಲಾಂಬಿಕ ಹಾಗೂ ತಗ್ಗಹಳ್ಳಿ ಗ್ರಾಮದ ಶಿವಕುಮಾರಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))