ರಾಯರು ಭಕ್ತರಿಗೆ ಸಕಲ ಅಭೀಷ್ಟ ದಯಪಾಲಿಸುವ ಮಹಾನುಭಾವರು

| Published : Aug 22 2024, 12:51 AM IST

ಸಾರಾಂಶ

Raya is a great benefactor who bestows all blessings on the devotees

ಕನ್ನಡಪ್ರಭ ವಾರ್ತೆ ಶಹಾಪುರ

ಕಲಿಯುಗದ ಕಲ್ಪತರು, ಕಲ್ಪವೃಕ್ಷ, ಕಾಮಧೇನು ಎಂದು ಪ್ರಖ್ಯಾತರಾದ ಗುರುರಾಘವೇಂದ್ರ ಗುರುಸಾರ್ವಭೌಮರು ಮನುಕುಲದ ಏಳಿಗೆಗಾಗಿ ಮತ್ತು ಧರ್ಮ ಪ್ರಚಾರಕ್ಕಾಗಿ ಅವತರಿಸಿದ ದೇವಾಂಶ ಸಂಭೂತರು. ಭಕ್ತರಿಗೆ ಸಕಲ ಅಭೀಷ್ಟಗಳನ್ನು ದಯಪಾಲಿಸುವ ಮಹಾನುಭಾವರು ಎಂದು ಪಂಡಿತ್‌ ನಾರಾಯಣಾಚಾರ್ಯ ಐ.ಜಿ. ಸುರುಪುರ ತಿಳಿಸಿದರು.

ನಗರದ ಹಳಪೇಟೆಯಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆಯ ನಿಮಿತ್ತ ಪ್ರವಚನ ನೀಡಿ ಮಾತನಾಡಿದ ಅವರು, ಗುರುರಾಯರು ತಾವು ಸಂಪಾದಿಸಿರುವ ತಪಸ್ಸಿನ ಫಲವನ್ನು ಭಕ್ತ ಜನಕೋಟಿಗೆ ಹಂಚುತ್ತಿದ್ದಾರೆ. ಅದಕ್ಕಾಗಿಯೇ ಅಪ್ಪಣಾಚಾರ್ಯರು ತಾವು ಬರೆದಿರುವ ರಾಘವೇಂದ್ರ ಸ್ತೋತ್ರದಲ್ಲಿ ರಾಯರ ಮಹಿಮೆಯನ್ನು ಈ ರೀತಿ ಉಲ್ಲೇಖಿಸಿದ್ದಾರೆ ಎಂದರು.

ಬೆಳಿಗ್ಗೆ ಅಷ್ಟೋತ್ತರ, ವಿಶೇಷ ಅಲಂಕಾರ, ಪೂಜೆ, ಪಂಚಾಮೃತಾಭೀಷೇಕ, ಮಹಾಮಂಗಳಾರತಿ, ಜರುಗಿತು.

ಅಧ್ಯಕ್ಷ ತಿರುಮಲಾಚಾರ್ಯ ಭಕ್ರಿ, ವಾಸುದೇವಾಚಾರ್ಯ ಸಗರ, ಅರ್ಚಕ ನರಸಿಂಹಾಚಾರ್ಯ ರೊಟ್ಟಿ, ವಿಠ್ಠಲಾಚಾರ್ಯ ಪ್ರತಿನಿಧಿ ಇದ್ದರು.

------

21ವೈಡಿಆರ್4: ಶಹಾಪುರ ನಗರದ ಹಳಪೇಟೆಯಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆಯ ನಿಮಿತ್ತ ಪ್ರವಚನ ನೀಡಿದ ಐ.ಜಿ. ನಾರಾಯಣಾಚಾರ್ಯರು.