ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ‘ವೆನಮ್ಸ್’ ಸಹಾಯವಾಣಿಗೆ ಚಾಲನೆ

| Published : Sep 21 2025, 02:02 AM IST / Updated: Sep 21 2025, 02:03 AM IST

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ‘ವೆನಮ್ಸ್’ ಸಹಾಯವಾಣಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಅಡಿಯಲ್ಲಿರುವ ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್ ಕೇಂದ್ರವು, ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗ, ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾ ಕಣ್ಗಾವಲು ಕಚೇರಿಯ ಸಹಯೋಗದೊಂದಿಗೆ ಶನಿವಾರ ಹಾವು ಕಡಿತ ಮತ್ತು ವಿಷಕ್ಕೆ ಸಂಬಂಧಿಸಿದ ಇತರ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ‘ವೆನಮ್ಸ್’ ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಅಡಿಯಲ್ಲಿರುವ ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್ ಕೇಂದ್ರವು, ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗ, ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾ ಕಣ್ಗಾವಲು ಕಚೇರಿಯ ಸಹಯೋಗದೊಂದಿಗೆ ಶನಿವಾರ ಹಾವು ಕಡಿತ ಮತ್ತು ವಿಷಕ್ಕೆ ಸಂಬಂಧಿಸಿದ ಇತರ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ‘ವೆನಮ್ಸ್’ ಸಹಾಯವಾಣಿಯನ್ನು ಪ್ರಾರಂಭಿಸಿದೆ.ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ನಾಗರತ್ನ ಈ ಸಹಾಯವಾಣಿಯನ್ನು ಉದ್ಘಾಟಿಸಿ ಮಾತನಾಡಿ, ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಅಗತ್ಯವಿದೆ ಎಂದಭಿಪ್ರಾಯಪಟ್ಟರು.ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್‌ನ ಸಂಯೋಜಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್, ಹಾವು ಕಡಿತದ ಘಟನೆ ಮತ್ತು ಸಕಾಲಿಕ ಚಿಕಿತ್ಸೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ವೆನಮ್ಸ್ ಸಹಾಯವಾಣಿಯನ್ನು ವಿನ್ಯಾಸಗೊಳಿಸಲಾಗಿದೆ. ಜೀವಗಳನ್ನು ಉಳಿಸಲು ಮತ್ತು ವಿಳಂಬವಾದ ಆರೈಕೆಯಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡಲು ತ್ವರಿತ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.ತುರ್ತು ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವೃಂದಾ ಲಾತ್, ಆರೈಕೆಯ ಕುರಿತು ಅವಲೋಕನ ನೀಡಿದರು. ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗದ ಅಧ್ಯಾಪಕಿ ಉಷಾ, ವೆನಮ್ಸ್ ಕೇಂದ್ರದ ಸಂಶೋಧನಾ ಫಲಿತಾಂಶಗಳನ್ನು ವಿವರಿಸಿದರು.

ಗೌರವ ಅತಿಥಿ ಮಣಿಪಾಲ್ ಕ್ಲಸ್ಟರ್‌ನ ಸಿಓಓ ಡಾ. ಸುಧಾಕರ್ ಕಂಟಿಪುಡಿ, ಸಾರ್ವಜನಿಕ ಆರೋಗ್ಯ ಸಂಪರ್ಕದಲ್ಲಿ ಮಾಹೆ ಮಣಿಪಾಲದ ಪ್ರಯತ್ನಗಳನ್ನು ಶ್ಲಾಘಿಸಿದರು.ಜಿಲ್ಲಾ ಕಣ್ಗಾವಲು ಕಚೇರಿಯ ಸಹಾಯಕ ಅಧಿಕಾರಿ ಡಾ. ತೇಜಸ್ವಿನಿ ಪಾಟೀಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಮಲ್ ಕೃಷ್ಣನ್ ಎಸ್., ಪ್ರಾಧ್ಯಾಪಕ ಡಾ. ಜಯರಾಜ್ ಮೈಂಬಿಲ್ಲಿ ಬಾಲಕೃಷ್ಣನ್ ಉಪಸ್ಥಿತರಿದ್ದರು.