ಮುಂಡಾ ಬೀಚ್‌ನಲ್ಲಿ ಮತದಾನ ಜಾಗೃತಿ

| Published : Apr 24 2024, 02:15 AM IST

ಸಾರಾಂಶ

ಗಾಯಕ ಪ್ರಕಾಶ್ ಕಿನ್ನಿಗೋಳಿ ಬಳಗದಿಂದ ಮತದಾನ ಜಾಗೃತಿ ಗೀತೆಗಳನ್ನು ಹಾಡಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದಕ್ಷಿಣ ಕನ್ನಡ ಜಿಲ್ಲೆ ಸ್ವೀಪ್ ಸಮಿತಿ ಮತ್ತು ಮೂಲ್ಕಿ ತಾಲೂಕು ಪಂಚಾಯಿತಿ ಸಹಭಾಗಿತ್ವದಲ್ಲಿ ಲೋಕಸಭಾ ಚುನಾವಣೆ 2024ರ ಮತದಾನ ಜಾಗೃತಿ ಅಭಿಯಾನ ಹಳೆಯಂಗಡಿ ಸಮೀಪದ ಸಸಿಹಿತ್ಲು ಅಂತಾರಾಷ್ಟ್ರೀಯ ಮುಂಡಾ ಬೀಚ್‌ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲಾ ಪಂಚಾಯತ್ ಸಿಇಒ ಆನಂದ್ ಮಾತನಾಡಿ, ಮತದಾನ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು ಹಕ್ಕು ಚಲಾಯಿಸುವ ಮೂಲಕ ದೇಶದ ಪ್ರಗತಿ ಸಾಧಿಸೋಣ ಎಂದರು.

ಮೂಲ್ಕಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗುರುದತ್, ಮೂಡುಬಿದಿರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟಾಚಲಪತಿ, ಮೂಲ್ಕಿ ತಾಲೂಕು ವ್ಯಾಪ್ತಿಯ ಏಳು ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡರು.

ಗಾಯಕ ಪ್ರಕಾಶ್ ಕಿನ್ನಿಗೋಳಿ ಬಳಗದಿಂದ ಮತದಾನ ಜಾಗೃತಿ ಗೀತೆಗಳನ್ನು ಹಾಡಲಾಯಿತು.