ಮತದಾನ ನಮ್ಮ ಸಂವಿಧಾನ ನೀಡಿದ ಪವಿತ್ರವಾದ ಹಕ್ಕು: ಎಸ್.ಲಕ್ಷ್ಮಣ್‌

| Published : Nov 29 2024, 01:02 AM IST

ಸಾರಾಂಶ

Voting is a sacred right given by our Constitution: S. Laxman

-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಉದ್ಘಾಟನಾ ಕಾರ್ಘಕ್ರಮ

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಮತದಾನ ನಮ್ಮ ಸಂವಿಧಾನ ನೀಡಿದ ಪವಿತ್ರವಾದ ಹಕ್ಕು. ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನ ನಿಯಂತ್ರಿಸುತ್ತದೆ. ವಿಶೇಷವೆಂದರೆ ನಾವೆಲ್ಲರೂ ಇಂದು ಸಂವಿಧಾನ ಅಂಗೀಕಾರಗೊಂಡ ಅಮೃತ ಮಹೋತ್ಸವ ಸಂಭ್ರದಲ್ಲಿದ್ದೇವೆ. ಸಂವಿಧಾನ ನಮ್ಮೆಲ್ಲರಿಗೂ ರಕ್ಷಾಕವಚ ವಾಗಿದೆ, ನಮ್ಮನ್ನಾಳುವ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಜಿಲ್ಲಾ ಉಪನ್ಯಾಸಕ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್‌ ತಿಳಿಸಿದರು.

ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು. ಮತದಾನ ಮಾಡುವ ಹಕ್ಕು ನಮಗೆ ೧೮ ವರ್ಷ ತುಂಬಿದ ಕೂಡಲೇ ಬರಲಿದೆ. ಸಂವಿಧಾನ ನಮಗೆ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಾ ಬಂದಿದೆ. ಪ್ರಜಾಪ್ರಭುತ್ವದ ಬಹುದೊಡ್ಡ ಅಂಗ ಸಂವಿಧಾನ ಎಂದರು.

ಹಿರಿಯ ಉಪನ್ಯಾಸಕ ಕೆ.ಎನ್.ವಂಸತಕುಮಾರ್ ಮಾತನಾಡಿ, ಸಾಕ್ಷರತಾ ಕ್ಲಬ್‌ ಮೂಲಕ ಮತದಾನ ಜಾಗೃತಿ ಹಮ್ಮಿಕೊಂಡಿದೆ. ಸಂವಿಧಾನ ನೀಡಿದ ಮತದಾನದ ಹಕ್ಕನ್ನು ನಾವೆಲ್ಲರೂ ಜವಾಬ್ದಾರಿಯುತವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಮತದಾನದಿಂದ ವಂಚಿತರಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮಸ್ಥಾನ ಪಡೆದ ಕಾಲೇಜಿನ ಚಿತ್ತಾರ ತೇಜಸ್ವಿನಿ, ದ್ವಿತೀಯ ಸ್ಥಾನ ರಾಮಜೋಗಿಹಳ್ಳಿ ಕಾಲೇಜಿನ ಭವ್ಯ ರಾಧಿಕ, ಪ್ರಬಂಧ ಸ್ಪರ್ಧೆಯಲ್ಲಿ ಗಿರಿಯಮ್ಮ ಕಾಲೇಜಿನ ಶ್ರುತಿ, ಜಾನವಿ, ಅಶ್ವಿನಿ, ಬಿತ್ತಿಪತ್ರ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಷಣ್ಮುಖಕುಮಾರ್‌ ಧೋನಿ, ದ್ವಿತೀಯ ಸ್ಥಾನ ತಳಕು ಎಸ್‌ಜಿಟಿ ಕಾಲೇಜಿನ ಭಾವನ ರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಾಕ್ಷರತಾಕ್ಲಬ್ ನೋಡಲ್ ಅಧಿಕಾರಿ ಎಚ್.ಆರ್.ಜಬೀವುಲ್ಲಾ, ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ, ಉಪನ್ಯಾಸಕರಾದ ಹಭಿಬುಲ್ಲಾ, ನಾಗರಾಜ್‌ ಬೆಳಗಟ್ಟ, ಜಾನಕಮ್ಮ, ಶ್ರೀಮಂತ್, ಚಂದ್ರಣ್ಣ, ಕರಿಯಪ್ಪ, ಲೋಕೇಶ್, ವೀರೇಶ್, ಶೈಲಜಾ, ಭಾರತಿ ಉಪಸ್ಥಿತರಿದ್ದರು.

-----

ಪೋಟೋ: ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್‌ನ್ನು ಎಸ್.ಲಕ್ಷ್ಮಣ್‌ ಉದ್ಘಾಟಿಸಿದರು.

೨೬ಸಿಎಲ್‌ಕೆ೪

----

ಪೋಟೋ: ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದದ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

೨೬ಸಿಎಲ್‌ಕೆ೦೪