ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಸಂವಿಧಾನವು ಸರ್ಕಾರದ ವಿವಿಧ ಅಂಗಗಳನ್ನು ವಿಭಜಿಸುವ ಹಾಗೂ ರೂಪಿಸುವ ಜವಾಬ್ದಾರಿ ಹೊತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಕುಮಾರ್ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ರಾಷ್ಟ್ರೀಯ ಸೇವಾ ಯೋಜನ ಘಟಕಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಸರ್ವ ಜನಾಂಗದ ಹಿತ ಕಾಪಾಡುವ ವಿಧಿಗಳನ್ನು ರೂಪಿಸಿ ಎಲ್ಲರ ಅಭ್ಯುದಯಕ್ಕೆ ಸಂವಿಧಾನ ಕಾರಣ ಎಂದ ಅವರು, ಭಾರತೀಯರು 75 ವರ್ಷಗಳ ಕಾಲ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸಂವಿಧಾನದಿಂದ ಸಾಧ್ಯವಾಗಿದೆ. ಇದರಿಂದ ಭಾರತದ ಪ್ರಭುತ್ವದೊಂದಿಗೆ ಒಂದು ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ನಾಗರಾಜು ಮಾತನಾಡಿ, ನಮ್ಮ ಸಂವಿಧಾನವು ಸರ್ವ ಜನಾಂಗದ ಹಿತರಕ್ಷಣೆ ಕಾಪಾಡುವ ಕಾನೂನುಗಳನ್ನು ಜಾರಿಗೊಳಿಸಿ ಅವಕಾಶ ಕಲ್ಪಿಸಿದೆ. ಭಾರತದ ಸಂವಿಧಾನವು ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಆದರ್ಶ ಸಂವಿಧಾನವಾಗಿದ್ದು ಪ್ರತಿಯೊಬ್ಬ ನಾಗರಿಕರ ರಕ್ಷಣೆಗಾಗಿ ನಿಂತಿರುವುದರಿಂದ ಸಂವಿಧಾನವನ್ನು ಉಳಿಸುವುದು ಎಲ್ಲರ ಹೊಣೆ, ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯ ಎಂಬ ನಾಲ್ಕೂ ಆಧಾರ ಸ್ತಂಭಗಳ ಮೇಲೆ ನಿಂತಿದ್ದು, ಪ್ರಜೆಗಳಿಗೆ ಸಮಾನ ರೀತಿಯ ಹಕ್ಕುಗಳನ್ನು ಅವಕಾಶ ಕರುಣಿಸಿದ್ದು ದೇಶದಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ತತ್ವಗಳನ್ನು ಜಾರಿಗೊಳಿಸುವಲ್ಲಿ ಅಮೂಲ್ಯವಾದ ಪಾತ್ರ ವಹಿಸಿದೆ ಎಂದರು.
ಐಕ್ಯೂಎಸಿ ಸಂಚಾಲಕಿ ಪ್ರೊ.ವೇದಲಕ್ಷ್ಮೀ, ಪ್ರಾಧ್ಯಾಪಕರಾದ ಡಾ.ಲತಾ, ಡಾ.ರಂಜಿತ, ಮಂಜುನಾಥ್ ಮಾತನಾಡಿದರು.ಪ್ರಾಧ್ಯಾಪಕ ಸುರೇಶ್, ಡಾ,ಶಂಕರಲಿಂಗಯ್ಯ, ಡಾ.ಶ್ರೀನಿವಾಸಪ್ಪ, ಮುರುಳೀಧರ್, ಮಂಜುನಾಥ್ ಪೂಜಾರಿ, ಲೀಲಾವತಿ, ಸಿದ್ದೇಗೌಡ ಸೇರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.