ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ: ವಿಶ್ವಾಸ ನಂಬಿಕೆಯೇ ಜೀವಮಾನದ ಸಾಧನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಗಜಾನನ ಸೌಹಾರ್ದ ಬ್ಯಾಂಕ್‌ನ ಸಿಇಒ ಅವಧೂತ ಜೋಶಿ ಹೇಳಿದರು.ಪಟ್ಟಣದ ರಾಂಪೂರ ಪಿಎ ರಸ್ತೆಯ ಶ್ರೀಸಮರ್ಥ ವಿದ್ಯಾ ವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾನಿಕೇತನ ಪ್ರಾಥಮಿಕ ಶಾಲೆಗಳ ಶಿಕ್ಷಕರ ಬಳಗದ ಸಹಯೋಗದಲ್ಲಿ ಬೆಳಗಾವಿಯಲ್ಲಿ ನಡೆದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ನಿಮಿತ್ತ ಸಿಂದಗಿ ನಗರದಲ್ಲಿ ಹ್ಮಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಆರ್.ಡಿ.ಕುಲಕರ್ಣಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯಿಂದ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೀತಿ ಅಮೋಘ. ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದಲ್ಲಿ ಭವಿಷ್ಯ ರೂಪಿಸಲು ಸಾಧ್ಯ. ಅದರಂತೆ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾದವರು ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಮಾಡಲು ಸಾಧ್ಯ. ಅದಕ್ಕೆ ಕುಲಕರ್ಣಿ ನಿದರ್ಶನವೆಂದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಶಾಂತು ಹಿರೇಮಠ, ಸಂಸ್ಥೆಯ ನಿದೇಶಕ ಪಿ.ಡಿ.ಕುಲಕರ್ಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ, ಗುರುಮಾತೆಯರಾದ ಎಂ.ಪಿ.ಬುಕ್ಕಾ, ಎಸ್.ಐ.ಅಸ್ಕಿ, ಸತೀಶ್ ಕುಲಕರ್ಣಿ, ಎಸ್.ಎಸ್.ಪಾಟೀಲ, ನಂದಕುಮಾರ್ ಹೊಳ್ಳ, ಆರ್.ಎನ್.ಪಕೀರಪುರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.