ಸಾರಾಂಶ
ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಲಂಬಾಣಿ, ಕೊರಮ, ಭೋವಿ ಒಕ್ಕೂಟದಿಂದ ಸೆ.10ರಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಕೊರಚ ಸಮಾಜ ಇಲ್ಲ. ಕೊಲಂಬೋ ಹೆಸರಿನಲ್ಲಿ ಕೊರಮ, ಲಂಬಾಣಿ, ಭೋವಿ ಒಕ್ಕೂಟದ ಹೋರಾಟಕ್ಕೂ, ತಮ್ಮ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.
ದಾವಣಗೆರೆ: ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಲಂಬಾಣಿ, ಕೊರಮ, ಭೋವಿ ಒಕ್ಕೂಟದಿಂದ ಸೆ.10ರಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಕೊರಚ ಸಮಾಜ ಇಲ್ಲ. ಕೊಲಂಬೋ ಹೆಸರಿನಲ್ಲಿ ಕೊರಮ, ಲಂಬಾಣಿ, ಭೋವಿ ಒಕ್ಕೂಟದ ಹೋರಾಟಕ್ಕೂ, ತಮ್ಮ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಹಾ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್.ಕೊಟ್ರೇಶ, ರಾಜ್ಯ ಸಹ ಕಾರ್ಯದರ್ಶಿ, ವಕೀಲ ಎಸ್.ಕುಮಾರ, ಕೊಲಂಬೋ ಹೆಸರಿನಲ್ಲಿ ಕೊರಮ, ಲಂಬಾಣಿ, ಭೋವಿ ಸಮಾಜಗಳು ಸೆ.10ರಂದು ಕೈಗೊಂಡ ಹೋರಾಟದಲ್ಲಿ ಕೊರಚ ಸಮಾಜ ಬಾಂಧರು ಪಾಲ್ಗೊಳ್ಳುವುದಿಲ್ಲ ಎಂದರು.ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿ ತೃಪ್ತಿ ಮತ್ತು ತೃಪ್ತಿಕರವಾಗಿರುವುದಿಲ್ಲ ಎಂದು ಸೆ.10ರಂದು ಕೊರಮ, ಲಂಬಾಣಿ, ಭೋವಿ ಒಕ್ಕೂಟ ಹೋರಾಟ ಹಮ್ಮಿಕೊಂಡಿದೆ. ಒಕ್ಕೂಟದಿಂದ ಹೊರ ಬರಲು ಸಮಸ್ಯೆಗಳು ಉದ್ಭವಿಸಿದ್ದರಿಂದ ಕೊರಚ ಜನಾಂಗ ಒಕ್ಕೂಟದ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಪುನರುಚ್ಛರಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 16 ಸಾವಿರ ಜನಸಂಖ್ಯೆ, ಇಡೀ ರಾಜ್ಯದಲ್ಲಿ 56 ಸಾವಿರ ಜನಸಂಖ್ಯೆ ಇರುವ ಅತ್ಯಂತ ಸಣ್ಣ ಜನಾಂಗ ನಮ್ಮದು. ನಮ್ಮನ್ನು ಅಲೆಮಾರಿಗೆ ಸೇರಿಸಿ. ಕೊರಮ, ಲಂಬಾಣಿ, ಭೋವಿ ಒಕ್ಕೂಟದ ಹೋರಾಟದಲ್ಲಿ ನಮ್ಮ ಕೊರಚ ಸಮುದಾಯವೂ ಪಾಲ್ಗೊಳ್ಳುವುದೆಂಬ ತಪ್ಪು ಗ್ರಹಿಕೆ ಹೋಗಲಾಡಿಸಲು ರಾಜ್ಯವ್ಯಾಪಿ ಮಾಧ್ಯಮಗೋಷ್ಠಿ ಮೂಲಕ ಸ್ಪಷ್ಟಪಡಿಸುತ್ತಿದೆ ಎಂದರು.ಮಹಾಸಂಘದ ಜಿಲ್ಲಾಧ್ಯಕ್ಷ ಮಾರಪ್ಪ ಇದ್ದರು.