ಸಾರಾಂಶ
ಕಳೆದ ತಿಂಗಳು ಸರ್ಕಾರದ ಅನುದಾನದಿಂದ ಗ್ರಾಮದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಕೊಟ್ಟಿದ್ದೇನೆ. ಪ್ರಸ್ತುತ ಗ್ರಾಮದಲ್ಲಿ ೨ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣಗೊಂಡಿರುವುದರಿಂದ ವಿಶೇಷವಾಗಿ ಗ್ರಾಮದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವುದರ ಮೂಲಕ ಜನತೆಗೆ ಅನುಕೂಲ ಕಲ್ಪಿಸಿದ್ದಾರೆ. ಅಕ್ಟೋಬರ್ ೩೧ ರಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ೨,೫೦೦ ಕೋಟಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಹಲವು ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಲಕ್ಕೂರು ಹೋಬಳಿಯ ಬಾಳಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮಿರಪನಹಳ್ಳಿ ಗ್ರಾಮದಲ್ಲಿ ಫಿಲ್ಟರ್ ಪ್ರಕಾಶ್ ಅವರು ತಮ್ಮ ತಂದೆ ದಿ.ಬೈರಪ್ಪ ಅವರ ಜ್ಞಾಪಕಾರ್ಥವಾಗಿ ಸುಮಾರು ೪ ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಟಾಟನೆ ಮಾಡಿ ಮಾತನಾಡಿದರು.
ಮಿರಪನಹಳ್ಳಿ ಗ್ರಾಮದ ಜನತೆಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಫಿಲ್ಟರ್ ಪ್ರಕಾಶ್ ಅವರು ತಮ್ಮ ತಂದೆ ದಿ.ಬೈರಪ್ಪ ಅವರ ಹೆಸರಿನಲ್ಲಿ ಸುಮಾರು ೪ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದಾರೆ. ಹಲವು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿದ್ದು, ನಾನು ಸಹ ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ಘಟಕವನ್ನು ನಿರ್ಮಿಸಿ, ಗ್ರಾಮದ ಜನತೆಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.ಕಳೆದ ತಿಂಗಳು ಸರ್ಕಾರದ ಅನುದಾನದಿಂದ ಗ್ರಾಮದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಕೊಟ್ಟಿದ್ದೇನೆ. ಪ್ರಸ್ತುತ ಗ್ರಾಮದಲ್ಲಿ ೨ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣಗೊಂಡಿರುವುದರಿಂದ ವಿಶೇಷವಾಗಿ ಗ್ರಾಮದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಮಾಲೂರು- ಮಾಸ್ತಿ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರಸ್ತುತ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ನಿವೇಶನ ಇಲ್ಲದವರಿಗೆ ಉಚಿತವಾಗಿ ನಿವೇಶನ ನೀಡುವುದರ ಜತೆಗೆ ೧ ಸಾವಿರ ಮಂದಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ತಾಲೂಕಿನ ೨೮ ಗ್ರಾಪಂಗಳಲ್ಲಿ ನಿವೇಶನ ರಹಿತರು, ಬಡವರನ್ನು ಗುರ್ತಿಸಿದ್ದು, ಅವರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈಗಾಗಲೇ ಸಾರ್ವಜನಿಕರಿಂದ ೧೬ ಸಾವಿರ ಅರ್ಜಿಗಳು ಬಂದಿವೆ. ಪರಿಶೀಲನೆ ಮಾಡಿದಾಗ ೮ ಸಾವಿರ ಅರ್ಜಿಗಳು ಉಳಿದಿವೆ. ಕೆಲವು ನಿಯಮಗಳ ಪ್ರಕಾರ ನಿವೇಶನ ನೀಡಲಾಗುವುದು. ೮ ಸಾವಿರ ಮಂದಿಗೆ ಅ.31ರಂದು ಸಿಎಂ ಸಿದ್ದರಾಮಯ್ಯ ಬಂದಾಗ ಅವರಿಂದ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಪ್ರಕಾಶ್ ಅವರು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕಿಟ್ಟಣ್ಣ, ಶೆಟ್ಟಿಹಳ್ಳಿ ಎನ್.ರಾಮಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಸದಸ್ಯ ಚನ್ನರಾಯಪ್ಪ, ಸದಸ್ಯ ದಿನ್ನಹಳ್ಳಿ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್, ಕೋಮುಲ್ ನಿರ್ದೇಶಕ ಮಲಿಯಪ್ಪನಹಳ್ಳಿ ಶ್ರೀನಿವಾಸ್, ನಗರಸಭೆ ಸದಸ್ಯ ವೆಂಕಟೇಶ್(ಬುಲೆಟ್), ಗ್ರಾಪಂ ಮಾಜಿ ಅಧ್ಯಕ್ಷರಾದ ಸಂಪತ್‌ಕುಮಾರ್, ವಾಸುದೇವ್, ಮಾಸ್ತಿ ಜೆಸಿಬಿ ನಾಗರಾಜ್, ಫಿಲ್ಟರ್ ಪ್ರಕಾಶ್, ಸೌಮ್ಯ ಪ್ರಕಾಶ್, ಮುಖಂಡರಾದ ಚಂದ್ರಶೇಖರ್ ಯಾದವ್, ಮುನಿಸ್ವಾಮಿ, ಮಲಿಯಪ್ಪನಹಳ್ಳಿ ಆನಂದ್, ಪ್ರಗತಿ ಶ್ರೀನಿವಾಸ್, ಜಿವಿಕೆ ಚಂದ್ರು, ಪೆಟ್ರೋಲ್‌ಬಂಕ್ ಚಿಟ್ಟಿ, ಓಬಲರೆಡ್ಡಿ, ತಿಮ್ಮಾರೆಡ್ಡಿ, ರಮೇಶ್, ಅಶೋಕ್‌ರೆಡ್ಡಿ, ಶ್ರೀನಿವಾಸ್, ಡೈರಿನಂಜೇಗೌಡ, ರಾಜಣ್ಣ, ಗ್ರಾಮದ ಸುತ್ತಮುತ್ತಲಿನ ಮುಖಂಡರು ಇನ್ನಿತರರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))