ಮಾಗಡಿ: ಟೌನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ತಿರುಮಲೆ ಎಸ್.ಮಹದೇವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು.
ಮಾಗಡಿ: ಟೌನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ತಿರುಮಲೆ ಎಸ್.ಮಹದೇವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು.
ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿದ್ದ ಗೋಪಾಲ್ ದೀಕ್ಷಿತ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಘೋಷಣೆಯಾಗಿದ್ದು ಮಹದೇವ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಮಹದೇವ್ ಅವಿರೋಧವಾಗಿ ಆಯ್ಕೆಯಾದರು.ನೂತನ ಅಧ್ಯಕ್ಷ ಮಹದೇವ್ ಮಾತನಾಡಿ, ಪಟ್ಟಣದಲ್ಲಿ 1912ರಲ್ಲಿ ಈ ಸೊಸೈಟಿ ಸ್ಥಾಪನೆಯಾಗಿ ಇಲ್ಲಿಗೆ 114 ವರ್ಷಗಳ ಇತಿಹಾಸ ಹೊಂದಿದೆ. ನಿರ್ದೇಶಕರು ಸೊಸೈಟಿ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಬೇಕು. ಸೊಸೈಟಿ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಕೊಡಲಿದ್ದು, ಇಲ್ಲಿ ಗುಣಮಟ್ಟದ ಬಟ್ಟೆ ಹಾಗೂ ಪಡಿತರ ವಿತರಣೆ ಮಾಡಲಾಗುತ್ತಿದೆ ಮುಂದೆ ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದರು.
ಟೌನ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಕರಲಮಂಗಲ ಮೋಹನ್‌ಕುಮಾರ್, ನಿರ್ದೇಶಕರಾದ ಗೋಪಾಲ್ ದೀಕ್ಷಿತ್, ಎಂ.ಎನ್. ಮಂಜುನಾಥ್, ಎ.ವಿ.ವಿಜಯ, ಜಿ.ಎಸ್.ಶಂಕರ್, ಟಿ.ಆರ್. ಸೋಮಶೇಖರ್, ಪದ್ಮ, ಪ್ರೇಮ ಲೀಲ, ಎಸ್. ನರಸಿಂಹಮೂರ್ತಿ, ಬಿ. ಆರ್.ಸಿದ್ದಲಿಂಗಪ್ಪ(ಈಶ) ಪುರಸಭೆ ಮಾಜಿ ಅಧ್ಯಕ್ಷರುಗಳಾದ ನಯಾಜ್, ಜಯಲಕ್ಷ್ಮೀರೇವಣ್ಣ, ಕೆ.ವಿ.ಬಾಲರಘು, ಡೇರಿ ಶಿವಕುಮಾರ್, ಭರತ್, ದಯಾನಂದ್, ಕಾರ್ಯದರ್ಶಿ ಚಿದಾನಂದ್, ಸಹಾಯಕ ದಿನೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.