ಸಾರಾಂಶ
ಮಸ್ಕಿ ತಾಲೂಕಿನ ಮುದ್ದಾಪೂರು ಗ್ರಾಮದಲ್ಲಿ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್.ಬಸನಗೌಡ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಕ್ಷೇತ್ರದಲ್ಲಿನ ಪ್ರತಿಯೊಂದು ಸಮುದಾಯದ ಜನರು ನಮ್ಮ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು 2 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಸರ್ವ ಸಮುದಾಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಖಾದಿ ಮತ್ತು ಗ್ರಾಮದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.ಮಸ್ಕಿ ವಿಧಾನಸಭಾ ಕ್ಷೇತ್ರದ ಮುದ್ದಾಪುರ ಗ್ರಾಮದಲ್ಲಿ ₹14 ಲಕ್ಷ ಅನುದಾನದಲ್ಲಿ ಸ್ಮಶಾನ ಜಾಗಕ್ಕೆ ಕಂಪೌಂಡ ನಿರ್ಮಾಣ ಹಾಗೂ ಈದ್ಗಾ ಮೈದಾನ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ಉಪಚುನಾವಣೆಯಲ್ಲಿ ಮಸ್ಕಿ ಕ್ಷೇತ್ರ ಮತದಾರರು ನನ್ನನ್ನು ಅತಿ ಹೆಚ್ಚಿನ ಮತ ನೀಡಿ ರಾಜ್ಯದ ಗಮನ ಸೆಳೆಯುವಂತೆ ಮಾಡಿದರು. ಆದರೆ ಅಂದಿನ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿತು. ಆದರೂ ಸಹ ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಮತ್ತೋಮ್ಮೆ ಶಾಸಕರನ್ನಾಗಿ ಮಾಡಿದ್ದರಿ ಆದ್ದರಿಂದ ನನಗೆ ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಂಡು ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದರು.
ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ರಾಜ್ಯದ ಜನರು ಜಾತಿ ಧರ್ಮ ಆಧಾರದಲ್ಲಿ ಆಳುವ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ನಂತರ ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಫರಿದ್ ಖಾನ್ಸಾಬ್ ಮಾತನಾಡಿದರು.ಈ ವೇಳೆ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಪಂಪನಗೌಡ ಬಾದರ್ಲಿ, ಅಮ್ಜದ್ ಸೆಠ ಹಟ್ಟಿ, ಜಾಫರ್ ಅಲಿ ಜಾಗೀರಧಾರ್,ಪಕ್ಷದ ಮುಖಂಡರು,ಕಾರ್ಯಕರ್ತರು,ಗ್ರಾಮಸ್ಥರು ಇದ್ದರು.