ರಾಜಕಾರಣದಲ್ಲಿ ಪ್ರಾಮಾಣಿಕತೆ, ವಾಸ್ತವ ಅರಿತು ಜನಸೇವೆ ಮಾಡಬೇಕು: ಪಿ.ಎಂ.ನರೇಂದ್ರಸ್ವಾಮಿ

| Published : Mar 13 2024, 02:03 AM IST

ರಾಜಕಾರಣದಲ್ಲಿ ಪ್ರಾಮಾಣಿಕತೆ, ವಾಸ್ತವ ಅರಿತು ಜನಸೇವೆ ಮಾಡಬೇಕು: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜೂನಿಯರ್ ಕಾಲೇಜಿಗೆ ಒಂದು ಕಾಲು ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಶೀಘ್ರ ಪೂಜೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕುಡಿವ ನೀರಿನ ಯೋಜನೆ, ನೀರಾವರಿ, ಮುಂತಾದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ನನ್ನ ಬೇಡಿಕೆಯನ್ನು ಮನ್ನಿಸಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಭವಿಷ್ಯದಲ್ಲಿ ಜನ ಜಾನುವಾರುಗಳಿಗೆ ಒಳಿತನ್ನು ಮಾಡಿ ಪ್ರಕೃತಿ ರಕ್ಷಿಸಬೇಕು. ದೇಶದ ಸಂಪತ್ತನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮದಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ರಾಜಕೀಯ ಮಾಡುವಾಗ ಪ್ರಾಮಾಣಿಕತೆ, ವಾಸ್ತವ ಅರಿತು ಜನಸೇವೆ ಮಾಡಿದರೆ ನಾವು ಸತ್ತ ಮೇಲೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತೇವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಂದಾಜು 2.25 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ನಿಂದ ಹಮ್ಮಿಕೊಂಡಿದ್ದ ಹೆಚ್ಚುವರಿ 8 ಕೊಠಡಿಗಳ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಜೂನಿಯರ್ ಕಾಲೇಜಿಗೆ ಒಂದು ಕಾಲು ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಶೀಘ್ರ ಪೂಜೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕುಡಿವ ನೀರಿನ ಯೋಜನೆ, ನೀರಾವರಿ, ಮುಂತಾದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ನನ್ನ ಬೇಡಿಕೆಯನ್ನು ಮನ್ನಿಸಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದರು.

ಭವಿಷ್ಯದಲ್ಲಿ ಜನ ಜಾನುವಾರುಗಳಿಗೆ ಒಳಿತನ್ನು ಮಾಡಿ ಪ್ರಕೃತಿ ರಕ್ಷಿಸಬೇಕು. ದೇಶದ ಸಂಪತ್ತನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಇದೇ ವೇಳೆ ದಲಿತ ಮುಖಂಡರು ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಅಪೂರ್ಣಗೊಂಡ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಗ್ರಾಪಂ ಅಧ್ಯಕ್ಷೆ ಟಿ.ರಕ್ಷಿತ ಜೀವನ ಕುಮಾರ್, ಉಪಾಧ್ಯಕ್ಷೆ ಲತಾ ಮಹಾದೇವ, ಪ್ರಾಂಶುಪಾಲರಾದ ಆಲಂಗೂರು ಮಂಜುನಾಥ್, ಪಿಡಿಒ ರುದ್ರಯ್ಯ, ಹೌಸಿಂಗ್ ಬೋರ್ಡ್ ಎಇಇ ಲಾರೆನ್ಸ್‌, ರಕ್ಷಾ ವೆಂಚರ್ ತೇಜಸ್, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎಚ್.ವಿ.ಅಶ್ವಿನ್ ಕುಮಾರ್ ಸೇರಿದಂತೆ ಗ್ರಾಪಂಸದಸ್ಯರಾದ ಸದ್ರುಲ್, ಶಶಿಕಲಾ, ಜಮೀಲ್, ಲಿಯಾಕತ್ ಅಲಿ ಹಾಗೂ ಮುಖಂಡರಾದ ಪದ್ಮನಾಬ್, ಎಚ್.ವಿ.ರಾಜಣ್ಣ, ಸಾಗ್ಯ ಕೆಂಪಯ್ಯ, ನಾಗ ಸಿದ್ದಯ್ಯ, ರವಿ, ಗೋಪಾಲ, ವೆಂಕಟೇಶ್, ಶ್ರೀನಿವಾಸಾಚಾರಿ ಹಾಗೂ ಇತರರು ಇದ್ದರು.