ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜ. 15ರಿಂದ ಪ್ರಾರಂಭವಾಗುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸುವ ವೀಡಿಯೋ ಸಾಂಗ್ ಟ್ರೇಲರ್‌ನ್ನು ಮಠದಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕಾರ್ಮಿಕರ ಮೂಲಕ ಬಿಡುಗಡೆ ಮಾಡಿಸಲಾಯಿತು.ನಗರದ ಗವಿಮಠದ ಆವರಣದಲ್ಲಿ ಸ್ವಚ್ಛತಾ ಸೇವೆಗೈಯುತ್ತಿರುವ ಸೇವಾ ಸಿಬ್ಬಂದಿ ಲಕ್ಷ್ಮಿ, ನಾಗಮ್ಮ, ಬರಮವ್ವ, ಶೋಭಾ, ಲಕ್ಷ್ಮವ್ವ, ಈರಮ್ಮ, ಹುಲಿಗೆಮ್ಮ, ನಾಗಮ್ಮ, ಫಕೀರಮ್ಮ, ಗುಂಡಪ್ಪ, ಮಾತಂಗೆವ್ವ ಬಿಡುಗಡೆ ಮಾಡಿದರು.
ಗವಿಮಠ ಜಾತ್ರೆ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ೨೦೨೫ರ ಮಹಾಜಾತ್ರೆಗೆ ಭಕ್ತರನ್ನು ಅಹ್ವಾನಿಸಲಾಗಿದೆ.ಜ. ೧೫, ೧೬ ಹಾಗೂ ೧೭ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮೆರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್ ಬಿಡುಗಡೆಗೊಳಿಸಲಾಗಿದೆ.“ಭಕ್ತಿಯ ಮನೆ ಮನಗಳಲ್ಲಿ
ಮುಕ್ತಿಯ ಕೆನೆ ನೆನಹಿನಲ್ಲಿಓಂಕಾರವು ಕೋಟೆ ಕಟ್ಟಿ
ಬೆಟ್ಟಗಳು ಧ್ಯಾನದಲಿಸಿದ್ದ ಪುರುಷ ಗವಿಸಿದ್ದನೇ
ಇಷ್ಟ ಪ್ರಾಣ ಭಾವದಲ್ಲಿಜಾತ್ರೋತ್ಸವ ನಮ್ಮ ಯಾತ್ರೋತ್ಸವ” ಎಂಬ ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕ್ಕೆ ಜೀವ ತುಂಬುವ ಕಂಠಸಿರಿ ಕೊಪ್ಪಳದ ಗಾಯಕ ಸದಾಶಿವ ಪಾಟೀಲರದು. ಈ ಹಾಡಿನಲ್ಲಿ ಗವಿಸಿದ್ಧೇಶ್ವರ ಮಹಾರಥೋತ್ಸವದ ವೈಭವದ ದೃಶ್ಯ, ಶಿವಶಾಂತವೀರ ಹಾಗೂ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶ ಒಳಗೊಂಡಿದೆ. ತೆಪ್ಪೋತ್ಸವ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ ಪೂರ್ಣ ಪುಣ್ಯಕಾರ್ಯಗಳು ಇದರಲ್ಲಿ ಅಂತರ್ಗತವಾಗಿವೆ.
ನಂದಿಕೋಲು ಕುಣಿತ, ಸಿದ್ಧೇಶ್ವರ ಮೂರ್ತಿ ಮೆರವಣಿಗೆ ಮತ್ತು ಭಕ್ತಿಯ ಸಿಂಚನದ ಚಿತ್ರ ವಿಡಿಯೋ ಸೊಬಗನ್ನು ಹೆಚ್ಚಿಸಿದೆ. ಇಲ್ಲಿನ ಪ್ರಾಕೃತಿಕ ಬೆಟ್ಟ-ಗುಡ್ಡಗಳ, ಕೆರೆ, ಸಹಜತೆಯ ವೈಭವ ಮತ್ತಷ್ಟು ವಿಡಿಯೋದ ಆಕರ್ಷಣೆ ಹೆಚ್ಚಿಸಿವೆ.ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶ್ರೀ ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ನುಡಿ ಸೇವೆಗೈಯುವುತ್ತಿರುವಯದು ಮತ್ತೊಂದು ವೈಶಿಷ್ಟ್ಯ. ಸುಮಾರು ೧೫೦೦ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಸಾವಿರಾರು ಮೇಣದ ದೀಪಗಳು ಹಾಗೂ ಪೇಪರ್ ಗ್ಲಾಸುಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿರುವ ವೀಡಿಯೋ ಟ್ರೇಲರ್ ಸಾಂಗ್‌ನೊಂದಿಗೆ ಶ್ರೀಮಠದ ಭಕ್ತರಿಗೆ ಜಾತ್ರೆಗೆ ಆಹ್ವಾನ ನೀಡಲಾಗಿದೆ.
https://drive.google.com/file/d/1gW73hGsts1jhPuVKwJKU2Z7C9vC2Hdna/view?usp=drivesdk ಈ ಲಿಂಕ್ ಮೂಲಕ ಹಾಡನ್ನು ಡೌನ್ಲೋಡ್ ಮಾಡಬಹುದು.