ಕಾರ್ಮಿಕರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಿ: ಆರ್.ಗುರು

| Published : Mar 29 2024, 12:52 AM IST

ಸಾರಾಂಶ

ಕಾರ್ಮಿಕರು ತಮ್ಮ ಜೀವ ರಕ್ಷಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಮೋಟಾರು ವಾಹನದಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮವನ್ನು ದಂಡ ಶುಲ್ಕಕ್ಕೆ ಅಂಜಿ ಪಾಲಿಸುವುದಲ್ಲ, ತಮ್ಮ ಜೀವ ರಕ್ಷಣೆ ಮತ್ತು ಸುರಕ್ಷತೆಗಾಗಿ ಪಾಲಿಸಬೇಕು. ಸುರಕ್ಷತೆ ಪರಿಕಲ್ಪನೆಯನ್ನು ಸಂಕುಚಿತವಾಗಿ ನೋಡಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಕಾರ್ಮಿಕರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಉದ್ಯಮಿ ಆರ್. ಗುರು ಕಿವಿಮಾತು ಹೇಳಿದರು.

ನಗರದ ಕಲಾಮಂದಿರದಲ್ಲಿ ಗುರುವಾರ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ ಮೆಂಟ್, ಮೈಸೂರು ಚಾಪ್ಟರ್, ನಂಜನಗೂಡು ಇಂಡಸ್ಟ್ರೀಸ್ ಅಸೋಸಿಯೇಷನ್ ಹಾಗೂ ಮೈಸೂರು ವಿಭಾಗದ ಎಲ್ಲಾ ಕಾರ್ಖಾನೆಗಳ ವತಿಯಿಂದ ಆಯೋಜಿಸಿದ್ದ 53ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ- 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಮಿಕರು ತಮ್ಮ ಜೀವ ರಕ್ಷಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಮೋಟಾರು ವಾಹನದಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮವನ್ನು ದಂಡ ಶುಲ್ಕಕ್ಕೆ ಅಂಜಿ ಪಾಲಿಸುವುದಲ್ಲ, ತಮ್ಮ ಜೀವ ರಕ್ಷಣೆ ಮತ್ತು ಸುರಕ್ಷತೆಗಾಗಿ ಪಾಲಿಸಬೇಕು. ಸುರಕ್ಷತೆ ಪರಿಕಲ್ಪನೆಯನ್ನು ಸಂಕುಚಿತವಾಗಿ ನೋಡಬಾರದು. ನಮ್ಮ ರಕ್ಷಣೆಯ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಸಮಾಜ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.

ಒಂದು ವೇಳೆ ತಮ್ಮ ಅಸುರಕ್ಷತೆ ಮತ್ತು ಅಜಾಗರೂಕತೆಯಿಂದ ಅಪಾಯಕ್ಕೆ ತುತ್ತಾದರೆ ನೀವು ಮಾತ್ರ ಕಷ್ಟ ಅನುಭವಿಸುವುದಿಲ್ಲ. ಬದಲಿಗೆ ನಿಮ್ಮ ಇಡೀ ಕುಟುಂಬವೇ ತೊಂದರೆಗೆ ಸಿಲುಕುತ್ತದೆ. ಆದ್ದರಿಂದ ಕಾರ್ಮಿಕರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದರು.

ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಕೆ. ಶ್ರೀನಿವಾಸ್, ಮೈಸೂರು ವಲಯ ಕಾರ್ಖಾನೆಗಳ ಜಂಟಿ ನಿರ್ದೇಶಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ ಮೆಂಟ್ ಅಧ್ಯಕ್ಷ ಸಿ.ವಿ. ಶ್ರೀನಿವಾಸನ್, ಎಚ್.ಎಸ್. ನರೇಂದ್ರಬಾಬು, ನಂಜನಗೂಡು ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ರಾಮಪ್ರಸಾದ್ ಇದ್ದರು.