ಮಕ್ಕಳ ಭೌತಿಕ ಜ್ಞಾನ ಹೆಚ್ಚಿಸಲು ಕಾರ್ಯಾಗಾರ, ಸಂವಾದಗಳು ಅವಶ್ಯಕ: ಪ್ರೊ.ಶಿವಣ್ಣ

| Published : Nov 23 2025, 01:45 AM IST

ಮಕ್ಕಳ ಭೌತಿಕ ಜ್ಞಾನ ಹೆಚ್ಚಿಸಲು ಕಾರ್ಯಾಗಾರ, ಸಂವಾದಗಳು ಅವಶ್ಯಕ: ಪ್ರೊ.ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಯಲದ ತಜ್ಞ ಪ್ರಾಧ್ಯಾಪಕರು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳೊಂದಿಗೆ ಸಂವಾದ, ಪ್ರಯೋಗಾಯಲ ನಡೆಸುವ ಮೂಲಕ ಮಕ್ಕಳ ಭೌತಿಕ ಜ್ಞಾನ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಮಕ್ಕಳು ಇಂತಹ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ಭೌತಿಕ ಜ್ಞಾನ ಹೆಚ್ಚಿಸಲು ಕಾರ್ಯಾಗಾರ, ಸಂವಾದಗಳು ಅವಶ್ಯಕವಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಎನ್ ಶಿವಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ರಾಗಿಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಯದ ವಿಜ್ಞಾನ ಶಿಕ್ಷಣ ಕೇಂದ್ರದಿಂದ ಆಯೋಜಿಸಿದ್ದ ವಿಜ್ಞಾನ ಹಬ್ಬ ಹಾಗೂ ವಿದ್ಯಾರ್ಥಿಗಳಿಗೆ ಸಂಚಾರಿ ವಿಜ್ಞಾನ ಪ್ರಯೋಗಾಲಯ ಕಾರ್ಯಾಗಾರ ಮತ್ತು ವಿಜ್ಞಾನ ಸಂವಾದ ಉದ್ಘಾಟಿಸಿದರು.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಯಲದ ತಜ್ಞ ಪ್ರಾಧ್ಯಾಪಕರು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳೊಂದಿಗೆ ಸಂವಾದ, ಪ್ರಯೋಗಾಯಲ ನಡೆಸುವ ಮೂಲಕ ಮಕ್ಕಳ ಭೌತಿಕ ಜ್ಞಾನ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಮಕ್ಕಳು ಇಂತಹ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

ನಂತರ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ನಡೆಸಿದ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ವಿಶೇಷ ಕುರಿತು ಮೈಸೂರು ವಿವಿ ತಜ್ಞರಾದ ನಿವೃತ್ತ ಪ್ರಾಂಶುಪಾಲ ಎಸ್.ಎನ್.ಪ್ರಸಾದ್, ಪ್ರಾಧ್ಯಾಪಕ ಪ್ರೊ.ಕೆ.ಎಸ್.ಮಲ್ಲೇಶ್, ಪ್ರೊ.ಎಸ್.ಎನ್.ಹೆಗ್ಗಡೆ, ಪ್ರೊ.ಎಸ್.ಶಶಿಕಾಂತ್ ಪ್ರೊ.ಎಂ.ಎಸ್.ಚಂದ್ರಶೇಖರ್ ಮತ್ತು ಸಿಎಫ್‌ಟಿಆರ್‌ಐನ ನಿವೃತ್ತ ವಿಜ್ಞಾನಿ ಡಾ.ಎನ್.ಭಾಗ್ಯಲಕ್ಷ್ಮಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸಂವಾದದಲ್ಲಿ ಮಕ್ಕಳಿಂದ ಮೂಡಿಬಂದ ಹಲವು ಪ್ರಶ್ನೆಗಳಿಗೆ ಸಮಪರ್ಕವಾದ ಉತ್ತರ ನೀಡುವ ಮೂಲಕ ಮಕ್ಕಳ ಜ್ಞಾನದ ಹಸಿವು ನೀಗಿಸಿದರು. ಮೈಸೂರು ವಿವಿಯಿಂದ ಆಗಮಿಸಿದ್ದ ಸಂಶೋಧಕರು ಪ್ರಯೋಗಗಳನ್ನು ಸಿದ್ಧಪಡಿಸಿ ಮಕ್ಕಳಿಂದಲೇ ಪ್ರಯೋಗ ಮಾಡಿಸುವ ಮೂಲಕ ಮಕ್ಕಳಿಗೆ ಅರಿವು ಮೂಡಿಸಿದರು.

ಇದೇ ವೇಳೆ ಮೈಸೂರು ವಿವಿಯಿಂದ ಆಗಮಿಸಿದ ಎಲ್ಲಾ ಪ್ರಾಧ್ಯಾಪಕರನ್ನು ಶಾಲೆ ಶಿಕ್ಷಕರ ವೃಂಧ ಹಾಗೂ ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ರಘು, ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ನಿರ್ಮಲ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಂಜುಳ, ಹಿರಿಯ ವಿದ್ಯಾರ್ಥಿಗಳಾದ ಆರ್.ಎಂ.ಲಿಂಗರಾಜು, ಆರ್.ಎಚ್.ರವಿಕುಮಾರ್, ಎಂ.ಜೆ.ಮುರಳೀಧರ್, ರಾ.ಸಾ.ಹನುಮಂತೇಗೌಡ, ಶಿಕ್ಷಕರಾದ ಶಿವರಾಮು, ಶ್ರೀನಿವಾಸ್, ಜಗದೀಶ್, ಭಾಸ್ಕರ್ ಸೇರಿದಂತೆ ಹಲವರು ಹಾಜರಿದ್ದರು.