ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೋಡಿಬೆಂಗ್ರೆ ಭಾಗವನ್ನು ಸ್ಥಳೀಯ ಜನತೆಯ ಬೇಡಿಕೆಯಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೆಮ್ಮಣ್ಣು ಗ್ರಾಪಂ ಗೆ ಸೇರಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮನವಿ ಮಾಡಿದ್ದಾರೆ.
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕೋಡಿಬೆಂಗ್ರೆ ಭಾಗವನ್ನು ಸ್ಥಳೀಯ ಜನತೆಯ ಬೇಡಿಕೆಯಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೆಮ್ಮಣ್ಣು ಗ್ರಾಪಂ ಗೆ ಸೇರಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸ್ವರ್ಣ ನದಿ ಮತ್ತು ಸೀತಾ ನದಿ ಸಂಗಮ ಸ್ಥಳ, ಅಳಿವೆ ಬಾಗಿಲಿನಲ್ಲಿರುವ ಕೋಡಿಬೆಂಗ್ರೆಯು ಮೂರು ಕಡೆಗಳಿಂದ ಜಲ ಪ್ರದೇಶದಿಂದ ಕೂಡಿದ್ದು, ಒಂದು ಕಡೆಯಿಂದ ಮಾತ್ರ ರಸ್ತೆ ಸಂಪರ್ಕ ಇರುತ್ತದೆ. ಕೋಡಿಬೇಂಗ್ರೆಯಿಂದ ಜನರು ತಮ್ಮ ಸರ್ಕಾರಿ ಕೆಲಸಗಳಿಗೆ ಕೋಡಿ ಗ್ರಾಪಂ ತೆರಳು 30 ಕಿಮೀ ಸುತ್ತಿಬಳಸಿ ಹೋಗಬೇಕು. ಇದರಿಂದ ಈ ಪ್ರದೇಶದ 275 ಕ್ಕೂ ಹೆಚ್ಚು ಕುಟುಂಬದ 2000ಕ್ಕೂ ಅಧಿಕ ಜನರು ಬವಣೆ ಪಡುತ್ತಿದ್ದಾರೆ.ಆದರೆ, ಕೋಡಿಬೆಂಗ್ರೆಯಿಂದ ಪಕ್ಕದ ಪಡುತೋನ್ಸೆ ಗ್ರಾಪಂಗೆ ಕೇವಲ 4 ಕಿ.ಮೀ. ದೂರವಿದೆ. ಆದ್ದರಿಂದ ಈ ಕೋಡಿಬೆಂಗ್ರೆ ವಾರ್ಡನ್ನು ಪಡುತೋನ್ಸೆ ಗ್ರಾ.ಪಂ.ಗೆ ಸೇರಿಸಿದರೇ 26 ಕಿ.ಮೀ. ಅಲೆದಾಟ ಕಡಿಮೆಯಾಗುತ್ತದೆ ಎಂಬ ಸ್ಥಳೀಯರ ಬೇಡಿಕೆಯಾಗಿದೆ. ಆ್ದರಿಂದ ಈ ಬಗ್ಗೆ ತುರ್ತಾಗಿ ಕ್ರಮವಹಿಸುವಂತೆ ಸಚಿವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.