ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಯೋಗವು ದೇಹ, ಮನಸ್ಸು ಮತ್ತು ಆತ್ಮಗಳ ಸಮ್ಮಿಲನವಾಗಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಬಿ.ಎಲ್.ಡಿ.ಇ. ಶರೀರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಖೋಡ್ನಾಪುರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಯೋಗವು ದೇಹ, ಮನಸ್ಸು ಮತ್ತು ಆತ್ಮಗಳ ಸಮ್ಮಿಲನವಾಗಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಬಿ.ಎಲ್.ಡಿ.ಇ. ಶರೀರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಖೋಡ್ನಾಪುರ ಹೇಳಿದರು.ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಯೋಗವು ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ಒಟ್ಟುಗೂಡಿಸುತ್ತದೆ. ಇದು ಒತ್ತಡ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಯೋಗವು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದಿರುವ ಜೀವನ ವಿಧಾನವಾಗಿದೆ. ಮನಷ್ಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವಿಯಾಗಿದ್ದು, ಈ ಮೂರರ ನಡುವೆ ಸಮತೋಲನ ಸಾಧಿಸಲು ಯೋಗ ಸಹಾಯ ಮಾಡುತ್ತದೆ ಎಂದು ಹೇಳಿದರು.ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ ಮಾತನಾಡಿ, ಯೋಗವು ಮನಸ್ಸನ್ನು ಕೇಂದ್ರಿಕರಿಸಲು ಇರುವ ಒಂದು ಪ್ರಮುಖ ವಿಜ್ಞಾನ. ಎಲ್ಲರು ನಿತ್ಯ ಯೋಗ, ಧ್ಯಾನ ಪ್ರಾಣಾಯಾಮಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಡೀನ್ ಡಾ.ಎ.ಭೀಮಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ವೈ.ತೆಗ್ಗಿ, ಡಾ.ಎಸ್.ಎಚ್.ಗೊಟ್ಯಾಳ, ಡಾ.ಎಸ್.ಎಚ್.ಗುತ್ತರಗಿ, ಡಾ.ಜಿ.ಶ್ರೀನಿವಾಸಲು, ಡಾ.ವಿದ್ಯಾವತಿ ಯಡಹಳ್ಳಿ, ಡಾ.ಎಸ್.ಜಿ.ಅಸ್ಕಿ, ಡಾ.ರಮೇಶ ಬೀರಗೆ, ಡಾ.ಸಂಗೀತಾ ಜಾದವ, ಡಾ.ಸಾವಿತ್ರಿ ಪಾಟೀಲ, ಡಾ.ಬಂಗಾರೆಮ್ಮ ಒಡೆಯರ, ವಿದ್ಯಾರ್ಥಿ ಮುಖಂಡರಾದ ವಿಕ್ರಮ ತುಂಬಗಿ, ರಿಹಾನ್ ಮಲ್ಲಿಕ ಹಳ್ಳೂರ, ರಕ್ಷಿತ ಬಟಕುರ್ಕಿ, ಮೌನೇಶ ಬಡಿಗೇರ, ಪ್ರಿಯಾಂಕಾ ಆನಿಕಿವಿ, ಲಕ್ಷ್ಮೀ ಬಳ್ಳೂರ, ಅಂಕಿತಾ ಬೆಳ್ಳಿಹಾರ, ಶರಣಗೌಡ ಸೇರಿ ಇತರರು ಇದ್ದರು. ಶಿಬಿರದ ಆಯೋಜಿಕಿ ಡಾ.ಸಾವಿತ್ರಿ ಪಾಟೀಲ ಮಾತನಾಡಿದರು.