ಹೊಸಪೇಟೆ: ಆರೋಗ್ಯಮಯ ಸಮಾಜಕ್ಕೆ ಯೋಗದ ಕೊಡುಗೆ ಅಪಾರ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಹಾಗೂ ಅಂತರರಾಷ್ಟ್ರೀಯ ಯೋಗ ಗುರು ಭವರ್‌ಲಾಲ್ ಆರ್ಯ ಹೇಳಿದರು.
ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ 2026-27ನೇ ಸಾಲಿನ ಪತಂಜಲಿ ಯೋಗ ಸಮಿತಿಯ ವಿವಿಧ ಪ್ರಭಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.ಪದಾಧಿಕಾರಿಗಳು:
ಪತಂಜಲಿ ಯೋಗ ಸಮಿತಿಯ ನೂತನ ಜಿಲ್ಲಾ ಸಂರಕ್ಷಕರಾಗಿ ಪ್ರಹ್ಲಾದ ಭೂಪಾಳ್ ನೇಮಕಗೊಂಡಿದ್ದಾರೆ. ಅವರ ಜತೆಯಲ್ಲಿ ಜಿಲ್ಲಾ ಪ್ರಭಾರಿಯಾಗಿ ಇ.ಸತ್ಯಪ್ಪ, ಮಹಿಳಾ ಸಮಿತಿಯ ಜಿಲ್ಲಾ ಪ್ರಭಾರಿಯಾಗಿ ಕವಿತಾ ಆನಂದ್, ಭಾರತ ಸ್ವಾಭಿಮಾನ್ ಟ್ರಸ್ಟ್ ಪ್ರಭಾರಿಯಾಗಿ ರಾಜೇಶ್ ಕಾರ್ವಾ, ಯುವ ಭಾರತ್ ಪ್ರಭಾರಿಯಾಗಿ ಶ್ರೀಧರ, ಕಿಸಾನ್ ಯೋಗ ಸೇವಾ ಸಮಿತಿಯ ಪ್ರಭಾರಿಯಾಗಿ ವಿಠೋಬಾ ಬಲ್ಲೂರ, ಮಾಧ್ಯಮ ಸಮಿತಿಯ ಪ್ರಭಾರಿಯಾಗಿ ಅನಂತ ಜೋಶಿ, ಯೋಗ ವಿಸ್ತಾರಕರಾಗಿ ಶ್ರೀನಿವಾಸ ಮಂಚಿಕಟ್ಟಿ, ಸಂವಾದ ಪ್ರಭಾರಿಯಾಗಿ ಇ.ರಾಮು, ಕಾರ್ಯಾಲಯ ಪ್ರಭಾರಿಯಾಗಿ ಜಯಶ್ರೀ ವೀರೇಶ ಆಯ್ಕೆಯಾಗಿದ್ದು, ಎಲ್ಲರೂ ಅಧಿಕಾರ ವಹಿಸಿಕೊಂಡರು.ಸಮಾರಂಭದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಶ್ರೀದೇವಿ ಅಶೋಕ್‌ಕುಮಾರ್, ರಾಜ್ಯ ಸಂವಾದ ಮಹಿಳಾ ಪ್ರಭಾರಿ ಚಂದ್ರಕಲಾ ದೇಶ್‌ಮುಖ್, ಯೋಗ ಸಾಧಕರಾದ ಉಮಾ ವಿಶ್ವನಾಥ್, ದಾಕ್ಷಾಯಿಣಿ ಶಿವಕುಮಾರ್, ಗೌರಮ್ಮ ಬ್ಯಾಳಿ, ಶ್ರೀರಾಂ, ಪ್ರಮೀಳಮ್ಮ , ರೇಣುಕಾ ಪರಗಿ, ರೇಣುಕಾ ಟಪಾಲ್, ಶಿವಮೂರ್ತಿ, ವೆಂಕಟೇಶ್ ವಾಸಿ, ಅಶೋಕ್ ಚಿತ್ರಗಾರ, ಭೂಪಾಳ ಶ್ರೀಪಾದ , ಡಾ ಪಿ.ಡಿ.ವಿನಾಯಕ ಇದ್ದರು. ಅನಂತ ಜೋಶಿ ಸ್ವಾಗತಿಸಿದರು. ಶಿವಾನಿ ಪ್ರಾರ್ಥಿಸಿದರು. ಶೈಲಜಾ ಕಳಕಪ್ಪ ನಿರೂಪಿಸಿದರು.
ಹೊಸಪೇಟೆ ನಗರದ ಫ್ರೀಡಂ ಪಾರ್ಕ್‌ನಲ್ಲಿ 2026-27ನೇ ಸಾಲಿನ ಪತಂಜಲಿ ಯೋಗ ಸಮಿತಿಯ ವಿವಿಧ ಪ್ರಭಾರಿಗಳ ಪದಗ್ರಹಣ ನೆರವೇರಿಸಲಾಯಿತು.