ಬಂಡೀಪುರ ಆನೆ ಶಿಬಿರಕ್ಕೆ ಯುವಕ ಎಂಟ್ರಿ: ಪೋಟೋ ವೈರಲ್

| Published : Oct 05 2025, 01:00 AM IST

ಸಾರಾಂಶ

ರಾಂಪುರ ಆನೆ ಶಿಬಿರದ ಮಾವುತನ ಸಂಬಂಧಿಕ ಯುವಕನೊಬ್ಬ ಸಾಕಾನೆಗೆ ಮುತ್ತು ಕೊಟ್ಟಿದ್ದಲ್ಲದೇ ಸಾಕಾನೆ ಮೇಲೆ ಹತ್ತು ಕುಳಿತ ಪೋಟೋ ಸೆರೆ ಕಂಡು ಪರಿಸರವಾದಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಅರಣ್ಯ ಇಲಾಖೆ ಇತ್ತೀಚಗೆ ಒಂದಲ್ಲ ಒಂದು ವಿವಾದ ಮಾಡಿಕೊಳ್ಳುತ್ತಿದ್ದು, ಇದೀಗಾ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಲ್ಕರೆ ವಲಯದ ರಾಂಪುರ ಆನೆ ಶಿಬಿರಕ್ಕೆ ಯುವಕನೊಬ್ಬ ಪ್ರವೇಶಿಸಿ ಸಾಕಾನೆ ಮೇಲೆ ಕುಳಿತು, ಆನೆ ಮುತ್ತಿಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರಾಂಪುರ ಆನೆ ಶಿಬಿರದ ಮಾವುತನ ಸಂಬಂಧಿಕ ಯುವಕನೊಬ್ಬ ಸಾಕಾನೆಗೆ ಮುತ್ತು ಕೊಟ್ಟಿದ್ದಲ್ಲದೇ ಸಾಕಾನೆ ಮೇಲೆ ಹತ್ತು ಕುಳಿತ ಪೋಟೋ ಸೆರೆ ಕಂಡು ಪರಿಸರವಾದಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯದ ರಾಂಪುರ ಆನೆ ಶಿಬಿರದಲ್ಲಿ ಸಾಕಾನೆ ಜೊತೆಗೆ ಚೆಲ್ಲಾಟ ವಾಡಿದ ಯುವಕನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಶಿಬಿರಕ್ಕೆ ಪ್ರವೇಶ ಕೊಟ್ಟ ಅಧಿಕಾರಿಯ ವಿರುದ್ದವೂ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಕಲ್ಕರೆ ವಲಯ ಅರಣ್ಯಾಧಿಕಾರಿ ರಾಜೇಶ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಸಾಕಾನೆ ಮೇಲೆ ಕುಳಿತು ಆನೆ ಮುತ್ತಿಟ್ಟಿರುವ ಯುವಕ ಮಾವುತನ ಸಂಬಂಧಿಕನಾಗಿದ್ದಾನೆ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ರಾಂಪುರ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಮಾವುತನಿಗೆ ನೋಟಿಸ್‌ ನೀಡಲಾಗಿದೆ ಮುಂದೆ ಈ ರೀತಿ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

೦೪ಜಿಪಿಟಿ೪

ಬಂಡೀಪುರದ ಕಲ್ಕರೆ ವಲಯದ ರಾಂಪುರ ಸಾಕಾನೆ ಶಿಬಿರದಲ್ಲಿ ಮಾವುತನ ಸಂಬಂಧಿಕ ಯುವಕ ಸಾಕಾನೆ ಮೇಲೆ ಕುಳಿತು ಪೋಸು ನೀಡಿದ ಚಿತ್ರ.೪ಜಿಪಿಟಿ೫

ಬಂಡೀಪುರದ ಕಲ್ಕರೆ ವಲಯದ ರಾಂಪುರ ಸಾಕಾನೆ ಶಿಬಿರದಲ್ಲಿ ಮಾವುತನ ಸಂಬಂಧಿಕ ಯುವಕ ಸಾಕಾನೆಗೆ ಮುತ್ತಿಟ್ಟ ಚಿತ್ರ.