ಸಾರಾಂಶ
ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾಮರಾಜನಗರ ಜಿಪಂ ಸಿಇಒ ಮೋನ ರೋತ್ ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾಮರಾಜನಗರ ಜಿಪಂ ಸಿಇಒ ಮೋನ ರೋತ್ ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.ಕೆಎ೧೦ ಜಿ ೦೬೨೩ ನಂಬರಿನ ಇನ್ನೋವಾ ಕಾರಲ್ಲಿ ಶನಿವಾರ ಸಂಜೆ ಜಿಪಂ ಸಿಇಒ ಕುಟುಂಬ ಸಮೇತ ಭೇಟಿ ನೀಡಿದಾಗ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪ್ರಶ್ನಿಸಿ ವಿಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ಕೆಆರ್‌ಎಸ್ ಪಕ್ಷದ ಕಾರ್ಯಕರ್ತರೊಬ್ಬರು, ಸರ್ಕಾರಿ ವಾಹನ ತಗೆದುಕೊಂಡು ಹೇಗೆ ಬಂದಿದ್ದೀರಾ ಎಂದು ಪ್ರಶ್ನಿಸಿದಾಗ ಜಿಪಂ ಸಿಇಒ ಬೆಟ್ಟಕ್ಕೆ ಮುಜರಾಯಿ ಇಲಾಖೆಯಿಂದ ಪರಿಶೀಲನೆಗೆ ಬಂದಿದ್ದೇನೆ ಎಂದಾಗ ಕಾರ್ಯಕರ್ತ ಮತ್ತೆ ಮರು ಪ್ರಶ್ನಿಸಿ, ನೀವು ಯಾವ ಇಲಾಖೆ ಎಂದಾಗ ಸಿಇಒ ದೇವಸ್ಥಾನದತ್ತ ಕುಟುಂಬ ಸಮೇತ ತೆರಳಿದ್ದಾರೆ.ಸರ್ಕಾರಿ ವಾಹನ ದುರ್ಬಳಕೆ ಆಗುತ್ತಿದೆ ಎಂಬ ಆರೋಪ ಜಿಪಂ ಸಿಇಒ ಮೇಲೆ ಬಂದಿದೆ. ಆದರೆ ಜಿಪಂ ಸಿಇಒ ಅವರಿಗೆ ಆಗದ ಸಿಬ್ಬಂದಿ ಹೇಳಿ ವಿಡೀಯೋ ಮಾಡಿಸಿದ್ದಾರೆ ಎಂದು ಹೆಸರೇಳಲಿಚ್ಚಿಸಿದ ಸಿಬ್ಬಂದಿ ಹೇಳಿದ್ದಾರೆ.
ಸರ್ಕಾರಿ ವಾಹನದಲ್ಲಿ ಕುಟುಂಬದವರನ್ನು ಕರೆ ತಂದಿರುವುದನ್ನು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಗಿರೀಶ್ ಪ್ರಶ್ನಿಸಿ, ಒಳಗೆ ಯಾರಿದ್ದಾರೆ ತೋರಿಸಿ ಎಂದು ಕೇಳಿದ ಸಂದರ್ಭದಲ್ಲಿ ಜಿಪಂ ಸಿಇಒ ಪೊಲೀಸರನ್ನು ಕರೆಸುವುದಾಗಿ ಪ್ರಶ್ನೆ ಮಾಡಿದವರಿಗೆ ಹೆದರಿಸಿದ್ದಾರೆ. ಅಲ್ಲದೆ, ಕುಟುಂಬದವರ ಚಿತ್ರ ತೆಗೆದರೆ ಪ್ರಕರಣ ದಾಖಲು ಮಾಡುವುದಾಗಿ ತಿಳಿಸಿರುವುದು ಸಹ ವೈರಲ್ ಆಗಿದೆ.