‘ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕತ್ವದ ಕೊರತೆ’

| Published : Apr 12 2024, 01:17 AM IST / Updated: Apr 12 2024, 04:08 AM IST

‘ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕತ್ವದ ಕೊರತೆ’
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕೆ.ಹೆಚ್.ಮುನಿಯಪ್ಪ ಮತ್ತೊಂದು ಕೆ.ಆರ್.ರಮೇಶ್ ಕುಮಾರ್ ಬಣಗಳಾಗಿ ಪಕ್ಷದ ಸಭೆಯಲ್ಲಿ ಕಾಳಗಗಳು ನಡೆದಿದೆ. ಇನ್ನು ೩ನೇ ಬಾಗಿಲು ಸಿದ್ದರಾಮಯ್ಯರ ಬಣವಿದ್ದು ಶೀಘ್ರದಲ್ಲಿಯೇ ತೆರೆಯ ಮೇಲೆ ಕಾಣಲಿದೆ.

  ಕೋಲಾರ : ಲೋಕಸಭಾ ಚುನಾವಣೆ ಯಾವುದೇ ರಾಜ್ಯಕ್ಕೆ ಸೀಮಿತವಲ್ಲ ದೇಶಕ್ಕೆ ಸಂಬಂಧಿಸಿದೆ, ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠರಾದ ಸೋನಿಯ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಅವರ ಹೆಸರುಗಳೇ ನಾಪತ್ತೆಯಾಗಿರುವುದನ್ನು ಗಮನಿಸಿದರೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆ ಇರುವುದು ಸ್ವಷ್ಟವಾಗಿದೆ ಎಂದು ರಾಜ್ಯದ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ನಾಯಕತ್ವ ಇಲ್ಲ ಎಂಬುವುದು ಒಪ್ಪಿಕೊಂಡಿದೆ. ಬಿಜೆಪಿ ತನ್ನ ಚುನಾವಣಾ ಪ್ರಚಾರ ಕಾರ್ಯಕ್ರಮದ ಆಜೆಂಡಾದಲ್ಲಿಯೇ ಮತ್ತೊಮ್ಮೆ ಮೋದಿ ಪ್ರಧಾನಿ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ, ಆದರೆ ಕಾಂಗ್ರೆಸ್ ಯಾರ ಹೆಸರನ್ನೂ ಪ್ರಸ್ತಾಪಿಸದೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಜಪ ಮಾಡುತ್ತಿದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ 3ನೇ ಬಣ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಭ್ರಷ್ಟಾಚಾರಕ್ಕೆ ಮತ ನೀಡಿದಂತೆ, ಬಿಜೆಪಿಗೆ ಮತ ನೀಡಿದರೆ ಅಭಿವೃದ್ದಿಗೆ ಮತ ನೀಡಿದಂತೆ ಕೋಲಾರದಲ್ಲಿ ಕಾಂಗ್ರೆಸ್‌ ಮನೆಯೊಂದು ಎರಡು ಬಾಗಿಲು ಆಗಿದೆ. ಒಂದು ಕೆ.ಹೆಚ್.ಮುನಿಯಪ್ಪ ಮತ್ತೊಂದು ಕೆ.ಆರ್.ರಮೇಶ್ ಕುಮಾರ್ ಬಣಗಳಾಗಿ ಪಕ್ಷದ ಸಭೆಯಲ್ಲಿ ಕಾಳಗಗಳು ನಡೆದಿದೆ. ಇನ್ನು ೩ನೇ ಬಾಗಿಲು ಸಿದ್ದರಾಮಯ್ಯರ ಬಣವಿದ್ದು ಶೀಘ್ರದಲ್ಲಿಯೇ ತೆರೆಯ ಮೇಲೆ ಕಾಣಲಿದೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರು ಸಿಗದೆ ಹೊರ ರಾಜ್ಯದ ಮೂಲದವರಿಗೆ ಟಿಕೆಟ್ ನೀಡಿದೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷದ ಆಡಳಿತದಲ್ಲಿ ಸದಾನಂದಗೌಡರು ಕೋಲಾರ ಹಾಗೂ ಇತರೆ ಬಯಲು ಸೀಮೆ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಎತ್ತಿನ ಹೊಳೆ ಯೋಜನೆಯನ್ನು ಮಂಜೂರು ಮಾಡಿದರು, ನಂತರ ಬಂದ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ೩ ಸಾವಿರ ಕೋಟಿ ಬಿಡುಗಡೆ ಮಾಡಿದರು, ಯರಗೋಳ್ ಯೋಜನೆ ಸೇರಿದಂತೆ ಕೋಲಾರದ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ಪಕ್ಷವು ಸಾಥ್ ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತಕ್ಕೆ ಬಂದ ನಂತರ ಬರಗಾಲ ವ್ಯಾಪಿಸಿದೆ. ಒಂದು ಗೋ ಶಾಲೆಗಳನ್ನು ತೆರೆದಿಲ್ಲ, ಭ್ರಷ್ಟಚಾರ ತಾಂಡವಾಡುತ್ತಿದೆ. ನೀರಿನ ಸಮಸ್ಯೆಗಳು ಬಗೆ ಹರಿಸಿಲ್ಲ ಇದೊಂದು ನಾಲಾಯಕ್ ಸರ್ಕಾರವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಬಡ ಜನತೆಯ ಗಮನ ಹರಿಸುತ್ತಿಲ್ಲ. ಪಂಚ ಖಾತ್ರಿ ಯೋಜನೆಗಳ ಜಪ ಮಾಡುತ್ತಾ ಮಜ ಉಡಾಯಿಸುತ್ತಿದ್ದಾರೆ ಎಂದು ದೂರಿದರು. 

ಡಿಸಿಎಂ ಡಿಕೆಶಿಗೆ ಬುದ್ಧಿ ಭ್ರಮಣೆ

ರಾಜ್ಯದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ರಿಗೆ ಮೈತ್ರಿ ಒಕ್ಕೂಟದ ಮುಖಂಡರು ಆಧಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವುದಕ್ಕೆ ಹೊಟ್ಟೆ ಉರಿಯಾಗಿ ಬುದ್ದಿ ಭ್ರಮಣೆಯಾದವರಂತೆ ಮಾತನಾಡುತ್ತಿದ್ದಾರೆ. ಈ ಹಿಂದೆ ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಅವರೇ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಬಳಿ ಚಿಕಿತ್ಸೆಗೆ ತೆರಳಿ ೧೪ ಮಂದಿ ಶಾಸಕರನ್ನು ಕಳುಹಿಸಿದ್ದರು. ಕಾಂಗ್ರೆಸ್‌ ತಮ್ಮನ್ನು ೧೪ ತಿಂಗಳ ಕಾಲ ಗುಮಾಸ್ತರಂತೆ ಬಳಸಿಕೊಂಡಿತು ಎಂದು ಕುಮಾರಸ್ವಾಮಿ ಆರೋಪಿಸಿದ್ದರು ಎಂಬುವುದನ್ನು ನೆನಪಿಸಿದರು.

 ಡಿಕೆಶಿ ಒಕ್ಕಲಿಗರ ನಾಯಕ ಅಲ್ಲ

ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಲೀಡರ್ ಅಲ್ಲ, ಕುಕ್ಕರ್ ಬ್ಲಾಸ್ಟ್ ಮಾಡಿದ್ದ ಆರೋಪಿಯನ್ನು ಬ್ರದರ್ ಎಂದು ಸಂಬೋಧಿಸಿದವರು ನಮ್ಮ ಬ್ರದರ್ ಎಂದು ಕರೆಯುವಂತ ನೈತಿಕತೆ ಅವರಿಗಿಲ್ಲ, ಜಾತಿ ಮತ್ತು ಜನಸಂಖ್ಯೆ ಗಣತಿಯ ಕಾಂತರಾಜ ವರದಿಯಲ್ಲಿ ಒಕ್ಕಲಿಗ ಸಮುದಾಯದವರಿಗೆ ಅನ್ಯಾಯವಾಗಿದೆ ಎಂದು ಸಿದ್ದು ಅವರೇ ಪ್ರೆಸ್ ಮೀಟ್ ಮಾಡಿಸಿ, ಈಗ ಅದು ಹೇಗೆ ಮತ ಯಾಚಿಸಲು ಮುಂದಾಗಿದ್ದಾರೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಲೋಕಸಭೆಯ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಮಾಜಿ ಶಾಸಕರಾದ ಕೆ.ಮಂಜುನಾಥ್ ಗೌಡ, ವರ್ತೂರು ಪ್ರಕಾಶ್, ವೈ.ಸಂಪಂಗಿ, ಬಿ.ಪಿ.ವೆಂಕಟ ಮುನಿಯಪ್ಪ, ಎಂ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ ಇದ್ದರು.