ಸಾರಾಂಶ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್ ಆಂದೋಲನ ಆರಂಭವಾಗಿದೆ.
ಚೆನ್ನೈ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್ ಆಂದೋಲನ ಆರಂಭವಾಗಿದೆ.
ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿ ಚಿತ್ರವಿರುವ ಬಾರ್‌ಕೋಡ್ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಬಿಜೆಪಿ ಸರ್ಕಾರದ ‘ಹಗರಣಗಳ’ ಮಾಹಿತಿ ಲಭಿಸುತ್ತದೆ. ಜನಪ್ರಿಯ ಗೂಗಲ್ ಪೇ (ಜಿ-ಪೇ) ಆ್ಯಪ್‌ನ ಹೆಸರು ಅನುಕರಿಸಿ ಇದಕ್ಕೆ ‘ಜಿ-ಪೇ’ (ಮೋದಿಜಿ ಪೇ) ಎಂದು ಹೆಸರಿಡಲಾಗಿದೆ.ಪ್ರಧಾನಿ ಮೋದಿ ಬುಧವಾರ ತಮಿಳುನಾಡಿನಲ್ಲಿ ಪ್ರಚಾರ ಸಮಾವೇಶ ನಡೆಸಿ ‘ಡಿಎಂಕೆ ಪಕ್ಷ ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮೊಟ್ಟಮೊದಲ ಕಾಪಿರೈಟ್ ಪಡೆದ ಪಕ್ಷ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಡಿಎಂಕೆಯಿಂದ ಮೋದಿ ವಿರುದ್ಧ ‘ಜಿ-ಪೇ’ ಪೋಸ್ಟರ್ ಸಮರ ಆರಂಭವಾಗಿದೆ.