ಚಿಕ್ಕಬಳ್ಳಾಪುರ: ಸಂಸದ ಸುಧಾಕರ್‌ ವಿರುದ್ಧ ಶಾಸಕ ಪ್ರದೀಪ್‌ ಈಶ್ಪರ್‌ ಅಸಭ್ಯ ಹೇಳಿಕೆ ವಿವಾದ

| Published : Sep 14 2024, 01:58 AM IST / Updated: Sep 14 2024, 04:26 AM IST

ಸಾರಾಂಶ

ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಅಸಭ್ಯವಾಗಿ ಮಾತನಾಡುವುದನ್ನು ಶಾಸಕ ಪ್ರದೀಪ್‌ ಈಶ್ಪರ್‌ ನಿಲ್ಲಿಸದಿದ್ದರೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಸ್ಥಾನದ ಬಿಜೆಪಿ ಅಭ್ಯರ್ಥಿ ಗಜೇಂದ್ರ ಎಚ್ಚರಿಸಿದ್ದಾರೆ.  

 ಚಿಕ್ಕಬಳ್ಳಾಪುರ : ಸಂಸದ ಡಾ.ಕೆ.ಸುಧಾಕರ್‌ ವಿರುದ್ಧ ಅಸಭ್ಯವಾಗಿ ಮಾತನಾಡುವುದನ್ನು ಶಾಸಕ ಪ್ರದೀಪ್‌ ಈಶ್ಪರ್‌ ನಿಲ್ಲಿಸದಿದ್ದರೆ ಅ‍ವರ ವಿರುದ್ಧ ಅದೇ ಪದಗಳನ್ನೇ ಬಳಸಬೇಕಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಗಜೇಂದ್ರ ಎಚ್ಚರಿಕೆ ನೀಡಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಸಂಸದ ಡಾ.ಕೆ.ಸುಧಾಕರ್ ತಂದೆ-ತಾಯಿ‌ ಬಗ್ಗೆ ಶಾಸಕರುಮಾತನಾಡುತ್ತಿದ್ದಾರೆ. ಅ‍ವರ ಭಾಷೆ ಬದಲಾಗದಿದ್ದರೆ ನಾವು ಶಾಸಕರ ವಿರುದ್ಧ ಅದೇ ಭಾಷೆ ಬಳಸಬೇಕಾಗುತ್ತೆ ಎಂದರು.

ತೀರ್ಪಿನ ಬಳಿಕ ಅಧಿಕಾರ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪೂರ್ಣಗೊಂಡಿದೆ. ಕೋರ್ಟ್‌ನ ಅಧಿಕೃತ ಆದೇಶದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳುತ್ತೇವೆ. ನಗರಸಭೆ ಚುನಾವಣೆಯಲ್ಲಿ ಸಹಕಾರ ಕೊಟ್ಟ ಎಲ್ಲಾ ಸದಸ್ಯರಿಗೆ ವೈಯಕ್ತಿಕವಾಗಿ ಋಣಿಯಾಗಿದ್ದೇವೆ. ಆದರೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು, ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗ್ಯಾಸ್ ನಾಗರಾಜು ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಗೆ ಐದು ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆ ಬಹಿರಂಗ ಚರ್ಚೆಗೆ ಸವಾಲ್ ಹಾಕಿದರು. ನಗರಸಭೆಯಲ್ಲಿ ಸೋತ ಹತಾಶೆಯಲ್ಲಿ ಅವಹೇಳನ‌ಕಾರಿ ಹೇಳಿಕೆ ನೀಡಿದ್ದಾರೆ ಎಂದರು.ಶಾಸಕರಿಗೆ 6 ಪ್ರಶ್ನೆಗಳು

ಶಾಸಕರಾದ ನೀಮಗೆ ಸವಿತ ಸಮಾಜದವರು ಏಕೆ ಬಹಿಷ್ಕಾರ ಹಾಕಿದ್ದಾರೆ. ಶಾಸಕರ ಬಳಿಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂಬುದರ ಶ್ವೇತ ಪತ್ರ ಪ್ರಕಟಿಸಿ. ಮಕ್ಕಳಿಗೆ ಬಟ್ಟೆ, ಮಹಿಳೆಯರಿಗೆ ಸೀರೆ, ಆ್ಯಂಬುಲೆನ್ಸ್ ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದೀರಿ, ಅಂದರೆ ಇಷ್ಟು ದಿನ ಯಾರು ಬಟ್ಟೆ ಇಲ್ಲದೇ ಓಡಾಡಿಲ್ಲಾ ಪದೇ ಪದೇ ಅದನ್ನು ಮಾತನಾಡಬೇಡಿ. ಲೋಕಸಭಾ ಚುನಾವಣೆಯಲ್ಲಿ ಡಾ.ಸುಧಾಕರ್‌ ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಸವಾಲು ಹಾಕಿ ಈವರೆಗೂ ಏಕೆ ಕೊಟ್ಟಿಲ್ಲ. ನಿಮ್ಮದೇ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು, ನಿಮ್ಮ ತಂದೆಯ ಆತ್ಮಹತ್ಯೆ ಬಗ್ಗೆ ಬಹಿರಂಗ ಸಭೆಯಲ್ಲಿ ಚರ್ಚೆ ಮಾಡೋಣಾ, ಅನಾಥ ಹುಡುಗ ಎಂಬುವುದರ ಬಗ್ಗೆಯೂ ಚರ್ಚೆ ಮಾಡೋಣಾ ಎಂದದರು..ಮಾನನಷ್ಟ ಮೊಕದ್ದಮೆ ಎಚ್ಚರಿಕೆ

ಮಾಜಿ ಶಾಸಕ ಎಂ.ಶಿವಾನಂದ್ ಮಾತನಾಡಿ, ಶಾಸಕ ಪ್ರದೀಪ್‌ ಈಶ್ವರ್‌ ಇದೇ ರೀತಿ ಮುಂದಿನ ದಿನಗಳಲ್ಲಿ‌ ಮಾತನಾಡುವುದನ್ನು ಮುಂದುವರಿಸಿದರೆ ಅ‍ರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಮಂಜುನಾಥ್, ಮುನಿಕೃಷ್ಣ, ಬಿಜೆಪಿ ಮುಖಂಡರಾದ ಲಕ್ಷ್ಮೀಪತಿ, ಆರ್.ಹೆಚ್.ಎನ್.ಅಶೋಕ್ ಕುಮಾರ್, ಅರುಣ್, ಮಧುಚಂದ್ರ, ಮಿತ್ರಾ, ಮಂಜುನಾಥ್,ತೇಜೆಂದ್ರ,ಸಾಗರ್, ಜಿಯಾಉಲ್ಲಾ, ಶ್ರೀರಾಮುಲು ಮತ್ತಿತ್ತರು ಇದ್ದರು.