ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರಿ ಶಾಲೆಯ ಅವರಣದಲ್ಲಿ ಅವರು ಮಸೀದಿ ಕಟ್ಟುತ್ತಾರೆ ಮತ್ತು ಸರ್ಕಾರ ಮೌನವಾಗಿರುತ್ತದೆ ಅಂದರೆ ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ ಮತ್ತು ಇದು ಕಾಂಗ್ರೆಸ್ ಸರ್ಕಾರದ ದುರಹಂಕಾರದ ಪರಮಾವಧಿಯಾಗಿದೆ ಎಂದು ವಕ್ಫ್ ಮತ್ತು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಸರ್ ಎಂ.ವಿಶ್ವೇಶ್ವರಯ್ಯ ಓದಿದ ನಗರದ ಕಂದವಾರ ವಾರ್ಡ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಡಾ.ಕೆ.ಸುಧಾಕರ್,ಮಾಜಿ ಸಂಸದ ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಆರ್.ಅಶೋಕ್ ಮಾತನಾಡಿ, ವಕ್ಫ್ ಬೋರ್ಡ್ ದುರಹಂಕಾರ ಇಲ್ಲಿ ನಿಚ್ಚಳವಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, 173 ವರ್ಷ ಹಳೆಯ ಶಾಲೆ
ವಿಶ್ವ ವಿಖ್ಯಾತ ಇಂಜನೀಯರ್ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಓದಿದ ಸುಮಾರು 173 ವರ್ಷಗಳಿಗೂ ಹಳೆಯದಾದ ಸರ್ಕಾರಿ ಶಾಲೆ ಒಳಗೆ ಗೋರಿ, ಮಸೀದಿ ಬಂದಿದ್ದು ಹೇಗೆ, .ಇಲ್ಲಿ ನಾಗರಕಲ್ಲುಗಳು ಹುತ್ತ ಇದೆ ಅದಕ್ಕೆ ನಮ್ಮ ಹಿಂದೂ ಮಹಿಳೆರು ಪೂಜೆ ಮಾಡ್ತಿದ್ದಾರೆ. ಆದರೆ ಅದಕ್ಕೂ ಸಹಾ ಬೇಲಿ ಮುಸ್ಲಿಂ ಬಾವುಟ ಹಾರಿಸಿದ್ದಾರೆ. ಮುಸ್ಲಿಂ ಸಂಪ್ರದಾಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸುತ್ತಾರಾ ಎಂದು ಪ್ರಶ್ನಿಸಿದರು.ಈ ರೀತಿ ಶಾಲಾ ಆವರಣದಲ್ಲಿ ಇದ್ದರೆ ಮಕ್ಕಳು ವಿದ್ಯೆ ಕಲಿಯುವುದಾದರೂ ಹೇಗೆ. ಲವ್ ಜಿಹಾದಿ ತರಹ ಲ್ಯಾಂಡ್ ಜಿಹಾದಿ ಮಾಡುತ್ತಿದೆ. ಮತ್ತು ಈ ಶಾಲೆಗೆ ಬರುವ ಮಕ್ಕಳ ಮನಸ್ಸು ಪರಿವರ್ತನೆ ಮಾಡಿ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಳ್ಳುವ ಹುನ್ನಾರವೇನಾದರೂ ನಡೆಯುತ್ತಿದೆಯಾ ಪ್ರಶ್ನಿಸಿದರು.
ಶಾಲೆಯ ಹೆಸರಿಗೆ ಪಹಣಿಹದಿನೈದು ದಿನಗಳ ಹಿಂದೆ ಸಂಸದ ಡಾ. ಕೆ.ಸುಧಾಕರ್ ನೀಡಿದ ಮಾಹಿತಿ ಮೇರೆಗೆ ತಾವು ಇಲ್ಲಿಗೆ ಬರುವುದಾಗಿ ತಿಳಿಸಿದ್ದೆ, ನಾನು ಯಾವಾಗ ಇಲ್ಲಿಗೆ ಬರುತ್ತೇನೆಂದು ತಿಳಿಯಿತೋ ಹತ್ತು ದಿನಗಳ ಹಿಂದೆ ವಕ್ಫ್ ಹೆಸರಿಗೆ ಹೋಗಿದ್ದ ಶಾಲೆಯ ಜಮೀನು ಕೂಡಲೆ ತಿದ್ದುಪಡಿಯಾಗಿ ಶಾಲೆಯ ಹೆಸರಿಗೆ ಮುಟೇಶನ್ ಮತ್ತು ಪಹಣಿ ಬದಲಾಗಿದೆ ಎಂದು ತಿಳಿಸಿದರು.
ಗೆಜೆಟ್ ನೋಟಿಫಿಕೇಶನ್ ರದ್ದಾಗಲಿಶ್ರೀರಂಗ ಪಟ್ಟಣದ ಮಹದೇವಪುರದಲ್ಲಿ ಚಿಕ್ಕಮ್ಮ ದೇವಲಯದ ಆಸ್ತಿ ಸಹಾ ವಕ್ಫ್ ನ ಆಸ್ತಿಯಾಗಿದೆ ಎಂದು ಅದನ್ನು ಕಬರಸ್ಥಾನ (ಸ್ಮಶಾನ) ಎಂದು ತಿದ್ದು ಪಡಿ ಮಾಡಿದ್ದರು. ಅಲ್ಲಿಗೆ ಬೇಟಿ ನೀಡುತ್ತಿದ್ದಂತೆ ಅದನ್ನು ಮತ್ತೆ ಚಿಕ್ಕಮ್ಮ ದೇವಸ್ಥಾನದ ಆಸ್ತಿ ಎಂದು ಬದಲಿಸಿದ್ದಾರೆ. ಸ್ಮಶಾನದಲ್ಲಿ ಇರಬೇಕಾದ ಪಿಶಾಚಿಗಳು ಊರೊಳಗೆ ಬಂದಿವೆ, ಅವುಗಳನ್ನೆಲ್ಲ ವಾಪಸ್ ಸ್ಮಶಾನಕ್ಕೆ ಓಡಿಸಬೇಕಾಗಿದೆ. ರೈತರ ಪಹಣಿಗಳಲ್ಲಿ ವಕ್ಫ್ ಅಂತ ನಮೂದಾಗಿರುವುದನ್ನು ಅಳಿಸುವವರೆಗೆ ಮತ್ತು 1994ರ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡದ ಹೊರತು ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಹೇಳಿದರು.ಶಾಲೆಗೆ ಬೇಟಿ ನೀಡಿ ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಸಿಲ್ದಾರ್ ಅನಿಲ್, ಶಿಕ್ಕಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೀವು ಹೇಗೆ ಶಾಲೆಯ ಆಸ್ತಿಯನ್ನು ವಕ್ಫ್ ಗೆ ವರ್ಗಾಯಿಸಿದಿ ಎಂದು ಪ್ರಶ್ನಿಸಿದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿಮ್ಮಶಾಲೆಯ ಸೊತ್ತನ್ನು ಬಂದೋ ಬಸ್ತು ಮಾಡಿಕೊಳ್ಳದೇ ವಕ್ಫ್ ಗೆ ವರ್ಗಾಯಿಸಿದರೂ ಎಕೆ ಚಕಾರ ಎತ್ತಿಲ್ಲಾ ಎಂದು ಪ್ರಶ್ನಿಸಿದರು.
ಸರ್ ಎಂವಿ ಸಮಾದಿಗೆ ಭೇಟಿಶಾಲೆಗೆ ಬೇಟಿಗೂ ಮುನ್ನಾ ಸಂಸದ ಡಾ.ಕೆ.ಸುಧಾಕರ್,ಮಾಜಿ ಸಂಸದ ಮುನಿಸ್ವಾಮಿ ಮತ್ತಿತರ ಣಾಯಕರೊಂದಿಗೆ ಮುದ್ದೇನಹಳ್ಳಿಗೆ ಭೇಟಿ ನೀಡಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.