ಸಾರಾಂಶ
ಗುಡಿಬಂಡೆ : ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದ್ದು, ಗುಡಿಬಂಡೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಮಯದಲ್ಲಿ ಕೆಡಿಪಿ ಸದಸ್ಯ ಎಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಮೈತ್ರಿ ಪಕ್ಷ ರಾಜ್ಯದಲ್ಲಿ ತಪ್ಪು ಸಂದೇಶಗಳನ್ನು ನೀಡುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡಿತ್ತು. ವಕ್ಫ್, ಪಡಿತರ ಚೀಟಿ ಸೇರಿದಂತೆ ಮೊದಲಾದ ಆರೋಪಗಳನ್ನು ಮಾಡುತ್ತಾ ಕಾಂಗ್ರೆಸ್ ವಿರುದ್ದ ಅಪಪ್ರಚಾರ ಮಾಡುತ್ತಿತ್ತು. ಆದರೆ ಮತದಾರ ತಕ್ಕ ಉತ್ತರ ನೀಡಿದ್ದಾನೆ ಎಂದರು,
ವಿರೋಧಿಗಳಿಗೆ ತಕ್ಕ ಪಾಠ
ನಂತರ ಕಾಂಗ್ರೇಸ್ ಹಿರಿಯ ಮುಖಂಡ ಕೃಷ್ಣೇಗೌಡ, ರಾಜ್ಯದಲ್ಲಿ ನುಡಿದಂತೆ ನಡೆಯುವುದು ಕಾಂಗ್ರೇಸ್ ಸರ್ಕಾರ ಮಾತ್ರ. ಚುನಾವಣೆಯ ಸಮಯದಲ್ಲಿ ನೀಡಿದಂತಹ ಎಲ್ಲಾ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಕೆಳಗಿಳಿಸಲು ಬಿಜೆಪಿ ಮೈತ್ರಿ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರಿಗೆಲ್ಲ ಈ ಚುನಾವಣೆ ತಕ್ಕ ಪಾಠ ಕಲಿಸಿದೆ ಎಂದರು.
ಇದೇ ಸಮಯದಲ್ಲಿ ಕೆಡಿಪಿ ಸದಸ್ಯ ರಿಯಾಜ್ ಪಾಷ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಲಿಷ್ಟವಾಗಿದೆ. ಮೈತ್ರಿ ಪಕ್ಷಗಳಿಂದ ಕಾಂಗ್ರೇಸ್ ಸರ್ಕಾರವನ್ನು ಏನೂ ಮಾಡೋಕೆ ಆಗೊಲ್ಲ. ರಾಜ್ಯದಲ್ಲಿ ಸಮಾನತೆ, ಜಾತಿಗಳ ಮಧ್ಯೆ ಗಲಬೆ ಸೃಷ್ಟಿಸುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಟೀಕಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ.ವಿಕಾಸ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬಾಲೇನಲ್ಲಿ ರಮೇಶ್, ಮುಖಂಡರಾದ ರಾಜೇಶ್, ಅಂಬರೀಶ್, ನಂಜುಂಡಪ್ಪ, ಬುಲೆಟ್ ಶ್ರೀನಿವಾಸ, ದಪ್ಪರ್ತಿ ನಂಜುಂಡ, ಚನ್ನರಾಯಪ್ಪ, ರಾಜಾರೆಡ್ಡಿ, ಸೇರಿದಂತೆ ಹಲವರು ಇದ್ದರು.